ನೀವು ಮನೆ ಮುಂದೆ ವೆಹಿಕಲ್ ಪಾರ್ಕ್ ಮಾಡ್ತೀರಾ? ಹಾಗಾದ್ರೆ ಇನ್ಮುಂದೆ ರಸ್ತೆ ಬದಿ ಮಾತ್ರವಲ್ಲ ಮನೆ ಮುಂದೆ ವೆಹಿಕಲ್ ನಿಲ್ಲಿಸಿದರೂ ಪಾರ್ಕಿಂಗ್ ಫೀಸ್ ಕಟ್ಟಬೇಕು. ಬಿಬಿಎಂಪಿ ಹೊಸ ಪಾರ್ಕಿಂಗ್ ಕಾಯಿದೆ ತರಲು ಮುಂದಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯ 8 ವಲಯಗಳಿಗೆ ಹೊಸ ಪಾರ್ಕಿಂಗ್ ನೀತಿ
ಬೆಂಗಳೂರಿನ ಮನೆ ಮಾಲೀಕರಿಗೆ BBMP ಮತ್ತೊಂದು ಶಾಕ್ ಕೊಡಲು ಮುಂದಾಗಿದೆ. ನೀವು ಮನೆ ಮುಂದೆ ಕಾರು ಪಾರ್ಕಿಂಗ್ ಮಾಡ್ತಿದ್ರೆ, ಎಲ್ಲೆಂದರಲ್ಲಿ ರಸ್ತೆ ಬದಿ ನಿಲ್ಲಿಸಿದ್ರೆ ಪಾರ್ಕಿಂಗ್ ಶುಲ್ಕ ಕಟ್ಟಿಸಿಕೊಳ್ಳಲು ಬಿಬಿಎಂಪಿ ಹೊಸ ಪಾರ್ಕಿಂಗ್ ಕಾಯಿದೆ ಜಾರಿಗೊಳಿಸಲು ಮುಂದಾಗಿದೆ. ಇನ್ಮುಂದೆ ಮನೆ ಮುಂದೆ ಕಾರ್ ಪಾರ್ಕಿಂಗ್ ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ರೆ, ಇನ್ನೂ ರಸ್ತೆ ಬದಿ ವಾಹನ ನಿಲ್ಲಿಸಲು ಹಣ ಕಟ್ಟಬೇಕು. ಕಾರ್ ಪಾರ್ಕಿಂಗ್ ಮಾಡಬೇಕು ಅಂದ್ರೆ ಹಣ ಕಟ್ಟಬೇಕು.
ವೆಹಿಕಲ್ ಗಾತ್ರದ ಮೇಲೆ 3 ಸಾವಿರದಿಂದ 5 ಸಾವಿರ ಹಣ ಕೊಟ್ಟು ಪಾರ್ಕಿಂಗ್ ಪರವಾನಗಿ ಪಡೆಯಬೇಕು. ನಗರದ ಎಂಟು ವಲಯಗಳಿಗೆ ಬಿಬಿಎಂಪಿ ಟೆಂಡರ್ ಕರೆದಿದೆ. ಕೆಟಿಟಿಪಿ ಪ್ರಕಾರ ಟೆಂಡರ್ ನಲ್ಲಿ ಭಾಗವಹಿಸಲು 40 ದಿನಗಳ ಕಾಲಾವಕಾಶ ನೀಡಬೇಕು. ಆದ್ರೆ ಕೇವಲ 15 ದಿನಗಳ ಕಾಲ ಟೆಂಡರ್ ನಲ್ಲಿ ಭಾಗವಹಿಸಲು ಕಾಲಾವಕಾಶ ಕೊಡಲಾಗಿದೆ.
ಬಿಬಿಎಂಪಿ ಈಗಾಗಲೇ ಪೇ ಅಂಡ್ ಪಾರ್ಕಿಂಗ್ ಪಾಲಿಸಿ ಜಾರಿ ಮಾಡುವ ಸಲುವಾಗಿ ಹಲವು ಬಾರಿ ಚರ್ಚೆ ಮಾಡಲಾಗಿದೆ. ಈಗ ಎಲ್ಲವೂ ವ್ಯವಸ್ಥಿತವಾಗಿ ಆಗಿ ಈಗ ನೀತಿ ಜಾರಿಯಾಗುತ್ತಿದೆ. 2020ರಲ್ಲಿ ನಿಗದಿ ಮಾಡಲಾದ ಶುಲ್ಕವನ್ನೇ ಬಿಬಿಎಂಪಿ ಅಂತಿಮಗೊಳಿಸಿದೆ. ಇದರ ಹೊರತಾಗಿ ಏರಿಯಾ ಹಾಗೂ ಜಾಗಗಳಿಗೆ ಅನುಗುಣವಾಗಿ ಶುಲ್ಕ ಇರಲಿದೆ. A, B, C ಹೀಗೆ ಮೂರು ಹಂತವಾಗಿ ಶುಲ್ಕ ಪಾವತಿಗೆ ಅವಕಾಶ ಮಾಡಿಕೊಡಲಾಗುತ್ತೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಗುಣಮಟ್ಟದ ರಸ್ತೆ ಅಭಿವೃದ್ಧಿ ಪಡಿಸದ ಬಿಬಿಎಂಪಿ ಹೊಸ ಪಾರ್ಕಿಂಗ್ ನೀತಿ ಜಾರಿಗೊಳಿಸಲು ಮುಂದಾಗಿದ್ದು ಜನಸಾಮಾನ್ಯರ ಜೇಬಿಗೆ ಸರ್ಕಾರ ಕೈ ಹಾಕಿದೆ. ಆದರೆ ಇದಕ್ಕೆ ಮಧ್ಯಮವರ್ಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಬಿಬಿಎಂಪಿ ಹೇಗೆ ಅನುಷ್ಟಾನಕ್ಕೆ ತರುತ್ತೋ ಕಾದು ನೋಡಬೇಕು.