ಸಾಂಕ್ರಾಮಿಕ ಪರಿಸ್ಥಿತಿಯಿಂದ ನಲುಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರಿನ ವೈದ್ಯಕೀಯ ಮೂಲಸೌಕರ್ಯವನ್ನು ನವೀಕರಿಸುವ (ಹೆಚ್ಚಿಸಲು) ಮಾಸ್ಟರ್ ಪ್ಲಾನ್ ಅನ್ನು ರೂಪಿಸಿದೆ.
ವೈದ್ಯಕೀಯ ಮೂಲಸೌಕರ್ಯವನ್ನು ಪುನರುಜ್ಜೀವನಗೊಳಿಸಲು ಶಿಫಾರಸು ಮಾಡುವ ನಾಗರಿಕ ಸಂಸ್ಥೆ ಕೂಡ ಸವಿಸ್ತಾರವಾದ ವಿವರಗಳನ್ನು ಕಳೆದ ವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು ಅನುಮೋದನೆಗಾಗಿ ಕಾಯುತ್ತಿದೆ. ಯೋಜನೆಯ ನವೀಕರಣಕ್ಕೆ ಬಿಬಿಎಂಪಿಯಿಂದ ಸುಮಾರು ₹ 800 ಕೋಟಿ ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ನಗರದ 27 ಸೆಕೆಂಡರಿ ಆಸ್ಪತ್ರೆಗಳನ್ನು 3,200 ಹಾಸಿಗೆಗಳ ಸಾಮರ್ಥ್ಯದಲ್ಲಿ ಹೊಸದಾಗಿ ನಿರ್ಮಿಸಲು ಬಿಬಿಎಂಪಿ ಯೋಜಿಸಲಾಗಿದೆ. ಒಟ್ಟು ಏಳು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು 2,750 ಹಾಸಿಗೆಗಳ ಸಾಮರ್ಥ್ಯದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. “ಈಗಾಗಲೇ ನಾವು ಬೆಂಗಳೂರಿನಲ್ಲಿ ಎರಡು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಳನ್ನು ಹೊಂದಿದ್ದು (ಬೌರಿಂಗ್ ಮತ್ತು ವಿಕ್ಟೋರಿಯಾ ಆಸ್ಪತ್ರೆ. ಇದಲ್ಲದೆ, ನಗರದ ವಿವಿಧ ಭಾಗಗಳಲ್ಲಿ ಇನ್ನು ಐದು ಹೊಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸೂಚಿಸಿದ್ದೇವೆ ”ಎಂದು ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್ ವಿವರಿಸಿದ್ದಾರೆ ಎಂದು ಡೆಕನ್ ಎರಾಲ್ಡ್ಸ್ ವರದಿ ಮಾಡಿದೆ. ಆಸ್ಪತ್ರೆಗಳನ್ನು ಸ್ಥಾಪಿಸುವ ಸ್ಥಳಗಳನ್ನು ನಾಗರಿಕ ಸಂಸ್ಥೆ ಗುರುತಿಸಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಇದಲ್ಲದೆ, ಬಿಬಿಎಂಪಿ ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (PHC) ನವೀಕರಿಸುವ ಯೋಜನೆಗಳನ್ನು ಸಹ ರೂಪಿಸಿದೆ.“ನಗರದ ಪಿಎಚ್ಸಿಗಳು ಬೇಸಿಕ್ ಮಟ್ಟದಲ್ಲಿವೆ. ನಾವು ಸೌಲಭ್ಯಗಳನ್ನು ಹೆಚ್ಚಿಸಿ ಸಮುದಾಯ ಮಟ್ಟದಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಹೇಳಿದ್ದಾರೆ. ನಗರದಲ್ಲಿ 57 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಐದು ಮಲ್ಟಿಸ್ಪೆಷಾಲಿಟಿ ಮತ್ತು ಮಾಧ್ಯಮಿಕ ಆಸ್ಪತ್ರೆಗಳನನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಲಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಮೂರನೇ ಅಲೆಗೂ ಮತ್ತು ನಮ್ಮ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಗುಪ್ತಾ,” ಖಾಸಗಿ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗದ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಸ್ಪಾಪಿಸಲಾಗಿದೆ. ನಾವು ಮಕ್ಕಳಿಗಾಗಿ ಪಡಿಯಾಟ್ರಿಕ್ ಆಸ್ಪತ್ರೆಯನ್ನು ಸಹ ಪ್ರಸ್ತಾಪಿಸಿದ್ದೇವೆ ಎಂದು ಹೇಳಿದ್ದಾರೆ.
ಬಿಬಿಎಂಪಿ ಮಾಸ್ಟರ್ಪ್ಲಾನ್ನ ಮುಖ್ಯಾಂಶಗಳು
27 ಹೊಸ ಸೆಕೆಂಡರಿ ಆಸ್ಪತ್ರೆಗಳು.
5 ಹೊಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು.
57 ಹೊಸ ಪಿಎಚ್ಸಿಗಳು.
27 ಸೆಕೆಂಡರಿ ಆಸ್ಪತ್ರೆಗಳಲ್ಲಿ 3,200+ ಹಾಸಿಗೆಗಳು.
2+5 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 2,750 ಹಾಸಿಗೆಗಳು.
ನಿರ್ಮಾಣ ಸಂಬಂಧಿತ ಕಾಮಗಾರಿಗಳಿಗೆ 800 ಕೋಟಿ ರೂ.
ಒಟ್ಟಾರೆ ₹ 1,000 ಕೋಟಿ ಅಗತ್ಯ ಎಂದು ತಿಳಿಸಿದೆ.