ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-9 ಈಗಾಗಲೇ ಹಲವು ವಿಶೇಷತೆಗಳಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ನವೀನರು-ಪ್ರವೀಣರು ಎಂಬ ಕಾನ್ಸೆಪ್ಟ್ನೊಂದಿಗೆ ಶೋ ನಡೆಯುತ್ತಿದ್ದು ಈಗಾಗಲೇ 8 ಸೀಸನ್ಗಳಲ್ಲಿ ಆಡಿ ಅನುಭವ ಹೊಂದಿದ್ದವರ ಜೊತೆಗೆ ಬಿಗ್ ಬಾಸ್ ಒಟಿಟಿಯ ನಾಲ್ವರ ಜೊತೆಗೆ ಪ್ರವೀಣರನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿದೆ.
ಇನ್ನು ಮೂರನೇ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದ ತುಸು ವಿಭಿನ್ನವಾಗಿ ನೀಡಿದ್ದ ಬಿಗ್ ಬಾಸ್ ಸ್ಪರ್ಧಿಗಳಿಗೆ ಚಿನ್ನ ಹುಡುಕಿ ತರುವ ಟಾಸ್ಕ್ ನೀಡಿದ್ದರು ಮತ್ತು ಈ ಅಸ್ಕಿನಲ್ಲಿ ನಟಿ ದೀಪಿಕಾ ದಾಸ್ ಅತಿ ಹೆಚ್ಚು ಚಿನ್ನವನ್ನು ಹೆಕ್ಕಿ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆಲುವ ಮೂಲಕ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಇನ್ನು ನಾಮಿನೇಶನ್ ವಿಚಾರಕ್ಕೆ ಬರುವುದಾದರೆ ಅನುಪಮ ಗೌಡ, ವಿನೋದ್ ಗೊಬ್ಬರಗಾಲ, ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ಅಮೂಲ್ಯ ಗೌಡ, ಮಯೂರಿ ಕ್ಯಾತರಿಯನ್ನು ಮನೆಯ ಸದಸ್ಯರು ವಿವಿಧ ಕಾರಣ ನೀಡಿ ನಾಮಿನೇಟ್ ಮಾಡಿದ್ದರು.

ಶನಿವಾರ ನಡೆದ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಕೆಲವರನ್ನು ಸೇಫ್ ಎಂದು ಘೋಷಿಸಿದ ನಿರೂಪಕ ಸುದೀಪ್ ಭಾನುವಾರ ಇನ್ನು ಕೆಲವರನ್ನು ಸೇಫ್ ಮಾಡಿ ಒಬ್ಬರನ್ನು ಎಲಿಮಿನೇಟ್ ಮಾಡುತ್ತಾರೆ ಎಂದು ತಿಳಿದು ಬಂದಿದೆ.
ಇನ್ನು ಬಿಗ್ ಬಾಸ್ ಸೀಸನ್ 9ರಲ್ಲಿ ಮೂರನೇ ವಾರದ ನಾಮಿನೇಷನ್ನಲ್ಲಿ ಧರ್ಶ್ ಚಂದ್ರಪ್ಪ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಈ ವಾರದ ಲಕ್ಷುರಿ ಬಜೆಟ್ ಟಾಸ್ಕನಲ್ಲಿ ಉತ್ತಮವಾಗಿ ಆಡಿದ ದರ್ಶ್ಗೆ ಕಡಿಮೆ ಮತಗಳು ನಿದಿದ್ದ ಕಾರಣ ಅವರನ್ನು ಮನೆಯಿಂದ ನಾಮಿನೇಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.