2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆಯಷ್ಟೇ ದಿನಗಳು ಬಾಕಿ ಇವೆ. ಈಗಾಗಲೇ ರಾಜಕೀಯ ನಾಯಕರು ಅಬ್ಬರದ ಪ್ರಚಾರ ಶುರುಮಾಡಿಕೊಂಡಿದ್ದಾರೆ. ಇದೀಗ ಕನಕಪುರ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರ ಅವರ ಪತ್ನಿ ಉಷಾ ಮತ ಯಾಚಿಸುತ್ತಿದ್ಧಾರೆ.
ಇಂದು ಕನಕಪುರದ (Kanakapura) ವಿವಿಧ ವಾರ್ಡ್ಗಳಲ್ಲಿ ಮನೆ ಮನೆಗೂ ತೆರಳಿ ಡಿಕೆಶಿ ಪತ್ನಿ ಉಷಾ ಮತ ಯಾಚನೆ ಮಾಡಿದ್ರು. ಈ ಸಲ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ನಿಮ್ಮ ಕ್ಷೇತ್ರದ ಮಗ ಸಿಎಂ ಆಗಲು ನೀವು ಶಕ್ತಿ ತುಂಬಬೇಕು ಎಂದು ಮನೆಮನೆಗೆ ತಿರುಗಿ ಪತಿ ಡಿ.ಕೆ.ಶಿವಕುಮಾರ್ಗೆ ಮತ ನೀಡುವಂತೆ ಉಷಾ ಶಿವಕುಮಾರ್ ಮನವಿ ಮಾಡಿದರು. ಈ ವೇಳೆ ಕನಕಪುರದ ಜನತೆ ಉಷಾ ಅವರನ್ನು ಕಂಡು ಮಾತನಾಡಿಸಿ ಶುಭ ಹಾರೈಸಿದ್ರು. ಈ ವೇಳೆ ಮಾತ್ನಾಡಿದ ಉಷಾ, ನಾನು ವೋಟಿಂಗ್ (Voting) ಮುಗಿಯುವವರೆಗೂ ಕ್ಯಾಂಪೇನ್ ಮಾಡುತ್ತೇನೆ. ನಾನು ವೋಟ್ ಕೇಳುವುದೇ ಬೇಕಿಲ್ಲ. ಜನರೇ ಮತ ಕೊಡುತ್ತಾರೆ. ನಾನು ಪ್ರತೀ ಚುನಾವಣೆಯಲ್ಲೂ (Election) ನನ್ನ ಪತಿಯ ಪರ ಪ್ರಚಾರ ಮಾಡುತ್ತೇನೆ. ಈ ಬಾರಿಯೂ ಜನ ನಮ್ಮನ್ನು ಆಶೀರ್ವದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.