ಕಣ್ಣೂರು: ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿಶ್ವಾದ್ಯಂತ ಸುದ್ದಿ ಮಾಡತೊಡಗಿದೆ. ಇಂಥದ್ದರಲ್ಲಿ ಕೇರಳದ ಉತ್ತರ ಭಾಗದ ಒಂದು ಪಟ್ಟಣವು ಇಸ್ರೇಲ್‌ನೊಂದಿಗೆ ನಿಕಟ ಬಾಂಧವ್ಯ ಹೊಂದಿ, ಈ ಸಂದರ್ಭದಲ್ಲಿ ಸುದ್ದಿ ಮಾಡಿದೆ. ಕಣ್ಣೂರಿನ ಸ್ಥಳೀಯ ಉಡುಪು ಘಟಕದ ನೂರಾರು ಟೇಲರ್‌ಗಳು ಕಳೆದ 8 ವರ್ಷಗಳಿಂದ ಇಸ್ರೇಲ್ ಪೊಲೀಸ್ ಪಡೆಗೆ ಸಮವಸ್ತ್ರ ಸಿದ್ಧಪಡಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಣ್ಣೂರು ಕೈಮಗ್ಗ ತಯಾರಿಕೆ ಮತ್ತು ಜವಳಿ ರಫ್ತಿನ ಅದ್ಭುತ ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ.
ಜಿಲ್ಲೆಯ ಮರ್ಯನ್ ಅಪರಲ್ ಪ್ರೈವೇಟ್ ಲಿಮಿಟೆಡ್‌ನ ಟೇಲರ್‌ಗಳು ಮತ್ತು ಇತರ ಉದ್ಯೋಗಿಗಳು ಇಸ್ರೇಲ್ ಪೊಲೀಸ್ ಪಡೆಯ ಸೊಗಸಾದ ತಿಳಿ ನೀಲಿ, ಉದ್ದನೆಯ ತೋಳಿನ ಸಮವಸ್ತ್ರದ ಶರ್ಟ್ ಸಿದ್ಧಪಡಿಸುತ್ತಾರೆ. ಡಬಲ್-ಪಾಕೆಟ್ ಶರ್ಟ್‌ಗಳು ಮಾತ್ರವಲ್ಲದೆ, ಘಟಕವು ಅದರ ತೋಳುಗಳ ಮೇಲೆ ಟ್ರೇಡ್‌ಮಾರ್ಕ್ ಲಾಂಛನಗಳನ್ನು ವಿನ್ಯಾಸಗೊಳಿಸಿ ಲಗತ್ತಿಸುತ್ತದೆ.