ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ಕಳೆದು ಹೋಗಲ್ಲ, ದೇಶದಲ್ಲಿ ಬಡತನ ನಿವಾರಣೆಯಾಗಲ್ಲ ಎನ್ನುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಧೈರ್ಯವಿದ್ದರೆ ಹಜ್ ಯಾತ್ರೆ ಬಗ್ಗೆ ಮಾತಾಡಲಿ. ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಲ್ಲಿಕಾರ್ಜುನ ಖರ್ಗೆ ಮಾತನಾಡುವಾಗ ಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿದ ಅಮಿತ್ ಶಾರನ್ನು ಟೀಕಿಸಿದ್ದರು.

ಈ ವೇಳೆ ಅಮಿತ ಶಾ ಮೋದಿ ಎಷ್ಟೇ ಬಾರಿ ಗಂಗಾ ನದಿಯಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ದೇಶದಲ್ಲಿ ಬಡತನ ನಿವಾರಣೆಯಾಗುತ್ತಾ ಎಂದು ವ್ಯಂಗ್ಯ ಮಾಡಿದ್ದರು.

ಖರ್ಗೆಯವರೇ ನಿಮಗೆ ಯಾವತ್ತೂ ಹಿಂದೂಗಳ ಆಚರಣೆಗಳೇ ಟಾರ್ಗೆಟ್ ಆಗುವುದು ಯಾಕೆ? ನೀವು ಯಾಕೆ ಹಜ್ ಯಾತ್ರೆ ಬಗ್ಗೆ ಕಾಮೆಂಟ್ ಮಾಡಲ್ಲ? ಹಜ್ ಯಾತ್ರೆ ಮಾಡುವುದರಿಂದ ಬಡತನ ನಿವಾರಣೆಯಾಗುತ್ತದಾ? ಒಂದು ಧರ್ಮದ ಆಚರಣೆಯನ್ನು ಮಾತ್ರ ಟಾರ್ಗೆಟ್ ಮಾಡಿ ಮಾತನಾಡುವುದು ತಪ್ಪು ಎಂದಿದ್ದಾರೆ. ನಿಮ್ಮ ರಾಜಕೀಯ ಲಾಭಕ್ಕೆ ಹಿಂದೂ ಆಚರಣೆ, ಪವಿತ್ರ ಗಂಗೆಯನ್ನು ಎಳೆದು ತರುವುದು ಯಾಕೆ ಎಂದು ಹಲವರು ಕಿಡಿ ಕಾರಿದ್ದಾರೆ.











