ಬಸವರಾಜ ಹೊರಟ್ಟಿ ಅವರು ಸುದೀರ್ಘವಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಗೊಳ್ಳುತ್ತಾ ಬಂದಿದ್ದು, ಆದರೆ ಈವರೆಗೆ ಶಿಕ್ಷಕರ ಸಮಸ್ಯೆ ಪರಿಹರಿಸುವ ಕೆಲಸ ಮಾಡಿಲ್ಲ. ಈ ದಿಸೆಯಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಆಮ್ ಆದ್ಮಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಮತದಾರರು ನನಗೆ ಆರ್ಶೀವಾದ ನೀಡುವ ಭರವಸೆ ಇದೆ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೆಂಕನಗೌಡ ಗೋವಿಂದಗೌಡ ಹೇಳಿದರು.
ಹುಬ್ಬಳ್ಳಿ ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಶಿಕ್ಷಕರ ಸಮಸ್ಯೆ ಬಗೆಹರಿಸಲು ಚುನಾವಣೆಗೆ ಸ್ಪರ್ಧೆ ಮಾಡದೇ ದಾಖಲೆ ನಿರ್ಮಿಸಲು ನಿಂತಿದ್ದೇನೆ ಎಂದು ಅವರೇ ಹೇಳುತ್ತಾರೆ. ಮತ್ತೊಂದು ಕಡೆಗೆ ಹೊರಟ್ಟಿ ಅವರ ಗರಡಿಯಲ್ಲಿದ್ದ ಗಡದಿನ್ನಿ ಅವರು ಹೊರಟ್ಟಿ ಅವರನ್ನು ಸೋಲಿಸಲು ನಿಂತಿದ್ದೇನೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಪಕ್ಷ ಯಾವದೇ ಚುನಾವಣೆ ಬಂದರೆ ನಾಮಕಾವಸ್ತೆ ಅಷ್ಟೇ ಸ್ಪರ್ಧೆ ಮಾಡುತ್ತದೆ. ಈ ದಿಸೆಯಲ್ಲಿ ನಾನು ಕೂಡಾ ಕಳೆದ ಒಂದೂವರೆ ವರ್ಷದಿಂದ ಓಡಾಡಿ ಶಿಕ್ಷಕರ ಸಂಕಷ್ಟಗಳೇನು ಎಂಬುದನ್ನು ತಿಳಿದಿದ್ದೇನೆ. ಆ ದೃಷ್ಟಿಯಿಂದ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಗೋವಿಂದಗೌಡ ತಿಳಿಸಿದರು.
ನಾನು ಈ ಹಿಂದೆಯೇ ಬಸವರಾಜ ಹೊರಟ್ಟಿ ಅವರಿಗೆ ಚುನಾವಣೆಗೆ ಸ್ಪರ್ಧೆ ಮಾಡಬೇಡಿ, ಈ ಬಾರಿ ಬಸವರಾಜ ಹೊರಟ್ಟಿ ಸೋಲು ಕಾಣುವುದು ಖಚಿತ. ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಓಪಿಎಸ್ ಮರುಜಾರಿ, ಕಾಲ್ಪನಿಕ ವೆಡಯನ, ಅನುದಾನ ರಹಿತ ಶಾಲೆಗಳಿಗೆ ಅನುದಾನ ಸೇರಿದಂತೆ ಮತ್ತಿತರ ಸಮಸ್ಯೆಗಳ ಪರಿಹಾರಕ್ಕೆ ಧ್ವನಿಯಾಗಲು ಈ ಬಾರಿ ಆಪ್ ಬೆಂಬಲಿತ ಅಭ್ಯರ್ಥಿಯಾದ ನಾನು ಜಯಗಳಿಸುವೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಲ್ಲಪ್ಪ ತಡಸದ, ಮಲ್ಲಿಕಾರ್ಜುನ ಹಿರೇಮಠ, ಗೋಪಾಲ ಕುಲಕರ್ಣಿ, ರೇವಣಸಿದ್ದಪ್ಪ ಹುಬ್ಬಳ್ಳಿ ಸೇರಿದಂತೆ ಮುಂತಾದವರು ಇದ್ದರು.