ಶಿಕ್ಷಕರ ಮತಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ 8ನೇ ಬಾರಿಯೂ ಗೆಲುವು ಸಾಧಿಸಿದ್ದಾರೆ.
ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮುಗಿದಿದ್ದು, ಬಸವರಾಜ ಹೊರಟಿ (ಬಿಜೆಪಿ)- 7076 ಮತಗಳನ್ನು ಪಡೆದರೆ ಗೆಲುವು ಸಾಧಿಸಿದ್ದಾರೆ, ಬಸವರಾಜ ಗುರಿಕಾರ (ಕಾಂಗ್ರೆಸ್)- 3314 ಸೋತಿದ್ದಾರೆ.
ಗೆಲುವಿನ ನಂತರ ಬೆಳಗಾಔಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಶಿಕ್ಷಕರ ಬೇಡಿಕೆ ಈಡೇರಿಕೆಗೆ ನಾನು ಸದಾ ಬದ್ದ. ಸಭಾಪತಿ ಆಗಿದ್ದರಿಂದ ಹೋರಾಟ ನಡೆಸಲು ಆಗಿರಲಿಲ್ಲ. ಈಗ ಮತ್ತಷ್ಟು ಹೋರಾಟ ನಡೆಸಲಿದ್ದೇನೆ. ಮುಂದೆ ಸಭಾಪತಿ ಅಥವಾ ಸಚಿವ ಸ್ಥಾನ ಪಕ್ಷಕ್ಕೆ ಬಿಟ್ಟ ವಿಷಯ ಎಂದು ಹೇಳಿದರು.

ಪಶ್ಚಿಮ ಶಿಕ್ಷಕರ ಕ್ಷೇತ್ರ
ಬಸವರಾಜ ಹೊರಟ್ಟಿ – 7076 ಮತ ಗಳಿಸಿ ಗೆಲುವು
ಬಸವರಾಜ ಗುರಿಕಾರ- 3314 ಮತಗಳಿಸಿ ಸೋಲು