ಕಾಂಗ್ರೆಸ್ ಮುಖಂಡ ಅಜ್ಜಂಪೀರ್ (Anjmpeer khadri) ಹೇಳಿಕೆಗೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda patil yatnal) ವಾಗ್ದಾಳಿ ನಡೆಸಿದ್ದಾರೆ. ಡಾ. BR ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂಬ ಹೇಳಿಕೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ BJP ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಖಾದ್ರಿಗೆ ಮಾನ ಮರ್ಯಾದೆ ಇಲ್ಲ. ನಮ್ಮ ಜನ ಬರೀ ಗಾಂಧಿ (Gandhiji) ಬೆನ್ನು ಹತ್ತಿದ್ದಾರೆ. ಗಾಂಧಿಗಿಂತ ಶ್ರೇಷ್ಠ ಮನುಷ್ಯ ಅಂಬೇಡ್ಕರ್ (Ambedkar) ಎಂದಿದ್ದಾರೆ.
ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಯತ್ನಾಳ್,ಗಾಂಧಿಗೆ ಮಹಾತ್ಮ ಅನ್ನಬೇಡಿ ಅಂತ ಅವರು ಅವಾಗಲೇ ಹೇಳಿದ್ದರು. ಮಹಾತ್ಮ ಗಾಂಧಿ ರಾಷ್ಟ್ರಪಿತ ಹೇಗೆ ಆಗುತ್ತಾರೆ? ದೇಶಕ್ಕೆ ಗಂಡ ಇರ್ತಾನಾ? ಅಂತ ಅಂಬೇಡ್ಕರ್ ಹೇಳಿದ್ದರು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.