ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಸೀನ್ ವಿಲಿಯಮ್ಸ್ ಸ್ಪೋಟಕ ಬ್ಯಾಟಿಂಗ್ ಫಲವಾಗಿ ಜಿಂಬಾಬ್ವೆ ತಂಡವು ಬಾಂಗ್ಲಾದೇಶ ವಿರುದ್ದ 3ರನ್‌ಗಳ ವಿರೋಚಿತ ಸೋಲು ಕಂಢಿದೆ.
ಬ್ರಿಸ್‌ಬೇನ್ ಗಬ್ಬಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶವು ಆರಂಭಿಕ ನಜ್‌ಮುಲ್ ಶಾಂತೋ (71 ರನ್, 55 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಫಲವಾಗಿ 7 ವಿಕೆಟ್ ನಷ್ಟಕ್ಕೆ 20 ಓವರ್‌ಗಳಲ್ಲಿ 150ರನ್‌ಗಳನ್ನು ಗಳಿಸಿತ್ತು.
ಗುರಿ ಬೆನ್ನಟ್ಟಿದ ಜಿಂಬಾಬ್ವೆ ಆರಂಭಿಕ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಸೀನ್ ವಿಲಿಯಮ್ಸ್(64 ರನ್, 42 ಎಸೆತ, 8 ಬೌಂಡರಿ) ಸ್ಪೋಟಕ ಬ್ಯಾಟಿಂಗ್ ಫಲವಾಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲು ಶಕ್ತವಾಯಿತು. ಬಾಂಗ್ಲಾದೇಶ ಪರ ವೇಗಿಗಳಾದ ಟಸ್ಕಿನ್ ಅಹ್ಮದ್(3), ಮೊಸಾದ್ದಿಕ್ ಹೊಸೇನ್(2), ಮುಸ್ತಾಫಿಜುರ್ ರೆಹಮಾನ್(2) ವಿಕೆಟ್ ಕಬಳಿಸಿದ್ದಾರೆ.













