ಬಾಂಗ್ಲಾದೇಶದಲ್ಲಿ (Bangladesh) ಅಲ್ಪ ಸಂಖ್ಯಾತ ಹಿಂದೂಗಳ (Hindus) ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಈ ದೌರ್ಜನ್ಯ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿದ ಹಿಂದೂ ಪರ ವಕೀಲ ಹಾಗೂ ಇಸ್ಕಾನ್ (ISCON) ಅರ್ಚಕ ಚಿನ್ನೋಯ್ ಕೃಷ್ಣ ದಾಸ್ ಪ್ರಭುರನ್ನ (Chinnoi krishna Das Prabhu) ಬಾಂಗ್ಲದೇಶ ಸರ್ಕಾರ ಬಂಧಿಸಿದೆ.
ಇದೀಗ ಹಿಂದೂ ಪರ ನಾಯಕನ ಬಂಧನದ ಬೆನ್ನಲ್ಲೇ ಬಾಂಗ್ಲದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಕೂಡಲೇ ಚಿನ್ನೋಯ್ ಕೃಷ್ಣ ದಾಸ್ ಪ್ರಭುರನ್ನು ಬಂಧನ ಮುಕ್ತ ಗೊಳಿಸುವಂತೆ ಆಗ್ರಹಿಸಿ, ಢಾಕಾ ವಿಶ್ವವಿದ್ಯಾನಿಲಯದ (Dhaka university) ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದೇ ಪ್ರತಿಭಟನೆ ವೇಳೆ ಕೆಲ ದುಷ್ಕರ್ಮಿಗಳು ಪ್ರತಿಭಟನಾ ನಿರತ ಹಿಂದೂಗಳ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.