ಬೆಂಗಳೂರಿನ (Bangalore) ಬಹುತೇಕ ಏರಿಯಾಗಳಲ್ಲಿ ಇಂದು ಮಧ್ಯಾಹ್ನ ವರುಣನ (Rain) ಸಿಂಚನವಾಗಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆಯಾಗಿತ್ತು. ಇಂದು ವರುಣರಾಯ ಬೆಂಗಳೂರಿಗೆ ತಂಪೆರದಿದ್ದಾನೆ. ಬೇಸಿಗೆಯ (summer) ದಗೆಗೆ ಬಳಲಿದ್ದ ಬೆಂಗಳೂರಿಗರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಮಧ್ಯಾಹ್ನದಿಂದಲೇ ಮೋಡಕವಿದ (cloudy) ವಾತಾವರಣವಿದ್ದಿದ್ದರಿಂದ ಮತ್ತು ಕಳೆದ ಕೆಲದಿನಗಳಿಂದ ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ ತಲೆದೋರಿದ್ದರಿಂದ ಮಳೆಯ ನಿರೀಕ್ಷೆಯಿತ್ತು. ಅದರಂತೆಯೇ ಇಂದು ಮಧ್ಯಾಹ್ನದ ನಂತರ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಅಬ್ಬರದ ಮಳೆಯಾಗಿದೆ.
ಬೇಸಿಗೆಯ ಬಿಸಿಲ ತಾಪದಿಂದ ಬೆಂದು ಹೋಗಿದ್ದ ಬೆಂಗಳೂರಿಗರಿಗೆ ಕೊನೆಗೂ ವರುಣ ಕೊಂಚ ರಿಲೀಫ್ ಕೊಟ್ಟಿದ್ದಾನೆ ಬೆಂಗಳೂರಿನ ಕೆಂಗೇರಿ ಭಾಗದಲ್ಲಿ 41.2 ಡಿಗ್ರಿ ತಾಪಮಾನ ದಾಖಲಾಗಿದ್ದು ,ಇದುವರೆಗೂ ಬೆಂಗಳೂರಿನ ಅತಿ ಹೆಚ್ಚಿನ ತಾಪಮಾನ ಎಂಬ ದಾಖಲೆ ಬರೆದಿತ್ತು .ಬೆಂದು ಹೋಗಿದ್ದ ಬೆಂಗಳೂರು ಇಂದು ಕೊಂಚ ಕೂಲ್ ಕೂಲ್ (cool) ಆಗಿದೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಕೂಡ ತಿಳಿಸಿದೆ.