ಬೆಂಗಳೂರಿನ ಸಿಸಿಬಿ ಪೊಲೀಸರು ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೆ ಮಾಡಿದ್ದ ಪೆಡ್ಲರ್ ಇಮಾರ್ ಶರೀಫ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಇಮಾರ್ ಶರೀಫ್ ಡಿಜೆ ಹಳ್ಳಿ ನಿವಾಸಿಯಾಗಿದ್ದು, ಮೇ 19ರಂದು ನಡೆದಿದ್ದ ಹೈಟೆಕ್ ರೇವ್ ಪಾರ್ಟಿಯಲ್ಲೂ ಭಾಗಿಯಾಗಿದ್ದ ಎನ್ನಲಾಗಿದೆ.. ವಿವಿಧ ಮಾದರಿ ಡ್ರಗ್ಸ್ ಜೊತೆಗೆ ಪಾರ್ಟಿಗೆ ಬಂದಿದ್ದ ಅಂತಾನು ಹೇಳಲಾಗಿದೆ.. ಶರೀಫ್ ಬಳಿ ನಲವತ್ತು ಎಂಡಿಎಂಎ ಮಾತ್ರೆಗಳು ಪತ್ತೆಯಾಗಿದ್ದು.. ಶರೀಫ್‌ನನ್ನು ತೀವ್ರ ವಿಚಾರಣೆ ಮಾಡಲಾಗ್ತಿದೆ. ಇದೀಗ ನಟಿ ಹೇಮಾ ಬಂಧನದ ಬಳಿಕ ಮತ್ತಷ್ಟು ವಿಚಾರ ಬೆಳಕಿಗೆ ಬರುವ ಸಾಧ್ಯತೆಯಿದೆ.
