ಬಿಬಿಎಂಪಿ ಕಳೆದ ಕೆಲವು ದಿನಗಳ ಹಿಂದೆ ಶುರು ಮಾಡಿದ ಬ್ಲಾಕ್ ಮತ್ತು ಲೇನ್ ಲೆವೆಲ್ ವ್ಯಾಕ್ಸಿನೇಷನ್ ಸಮೀಕ್ಷೆಯನ್ನು ಆರಂಭಿಸಿತ್ತು. 4,400ಕ್ಕೂ ಹೆಚ್ಚು ಮನೆಗಳಲ್ಲಿ ಸುಮಾರು 10,000 ಜನರು ಲಸಿಕೆ ಪಡೆಯಲು ನಿರಾಕರಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಬಿಬಿಎಂಪಿ ಆರೋಗ್ಯ ಇಲಾಖೆಯು ಲಸಿಕೆಯಲ್ಲಿ ಶೇ.100% ರಷ್ಟು ಗುರಿ ಸಾಧಿಸಲು ವಿವಿಧ ಪ್ರಯೋಗಗಳು ಮತ್ತು ವಿಭಿನ್ನ ಪ್ರಯತ್ನಗಳ ಹೊರತಾಗಿಯು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೊಳಗೇರಿಯಲ್ಲಿ ವಾಸಿಸುವ ಜನರು ವಿವಿಧ ಕಾರಣಗಳನ್ನು ನೀಡಿ ಲಸಿಕೆ ಹಾಕಿಸಿಕೊಳಲು ನಿರಾಕರಿಸುತ್ತಿದ್ದಾರೆ. ಬಿಬಿಎಂಪಿಯಿಂದ ಲಭ್ಯವಿರುವ ಮಾಹಿತಿ ಪ್ರಕಾರ ಸಮೀಕ್ಷೆಯಲ್ಲಿ ಸುಮಾರು 76,373 ಮನೆಗಳಲ್ಲಿ ಸುಮಾರು 4,437 ಮನೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿದ ಪೂರ್ವ ವಲಯದ ಅಧಿಕಾರಿಯೊಬ್ಬರು ʻʻವಿಶೇಷವಾಗಿ ಕೊಳಗೇರಿಗಳಲ್ಲಿ ವಾಸಿಸುವ ಜನರಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದ್ದೆ. ಕಡಿಮೆ ಆದಾಯವಿರುವ ವಸತಿ ಪ್ರದೇಶಗಳಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು, ಲಸಿಕೆ ಹಾಕಿಸಿಕೊಂಡ ನಂತರ ಅದರಿಂದ ಉಂಟಾಗುವ ಅಡ್ಡಪರಿಣಾಮಗಳಿಂದ ಅವರು ಕೆಲಸ ಕಳೆದುಕೊಳ್ಳುವ ಭೀತಿ ಅವರಲ್ಲಿದೆ ಮತ್ತು ಸಮೀಕ್ಷೆಯ ಭಾಗವಾಗಿ ಅಧಿಕಾರಿಗಳು ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದಾಗ ಜನರು ತಮ್ಮ ಮನೆ ಬಾಗಿಲನ್ನು ಹಾಕಿದರು ಮತ್ತು ಎಷ್ಟೋ ಮನೆಗಳಲ್ಲಿ ಬಾಗಿಲನ್ನೇ ತೆಗೆಯಲಿಲ್ಲʼʼ ಎಂದು ಹೇಳಿದ್ದಾರೆ.
ಅನೇಕ ಮಧ್ಯಪಾನ ಪ್ರಿಯರು ತಾವು ಲಸಿಕೆ ಪಡೆದ ನಂತರ ಹಲವು ದಿನಗಳವರೆಗೆ ಸಂಭವನೀಯ ಅಡ್ಡಪರಿಣಾಮಗಳಿಂದಾಗಿ ಮಧ್ಯಪಾನವನ್ನು ತ್ಯಜಿಸಬೇಕಾಗುತ್ತದೆ. ಇನ್ನು, ಕೆಲವರು ದಿನವಿಡೀ ಲಸಿಕೆ ಹಾಕಿಸಿಕೊಳ್ಳಲು ಕ್ಯೂನಲ್ಲಿ ನಿಂತಿರುತ್ತಾರೆ ಇದರಿಂದ ಅವರ ಒಂದು ದಿನದ ಸಂಪಾದನೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ಲಸಿಕೆ ಪಡೆದ ನಂತರ ಅನಾರೋಗ್ಯಕ್ಕೆ ಒಳಗಾಗುವ ಭಯದಿಂದ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ʻʻಜನರು ತಾವು ಕೆಲಸದಲ್ಲಿ ಬಿಡುವು ಸಿಗದ ಕಾರಣ ಮತ್ತು ಸಮಯವನ್ನು ಉಳಿಸುವ ಸಲುವಾಗಿ ಕೆಲವರು ಲಸಿಕೆ ಹಾಕಿಸಿಕೊಳ್ಳಲಿಲ್ಲ ಮತ್ತು ಕೆಲವರು ನಂತರ ಪಡೆಯುವುದಾಗಿ ಸಬೂಬು ಹೇಳಿ ಲಸಿಕೆ ಪಡೆಯುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಲಸಿಕೆ ಪಡೆಯುವುದರ ಬಗ್ಗೆ ತೀವ್ರ ವಿರೋಧವಿರುವ ಬ್ಲಾಕ್ ಮತ್ತು ಲೇನ್ಗಳನ್ನು ಈಗಾಗಲೇ ಗುರುತಿಸಿದ್ದು ಅಂತಹ, ಬ್ಲಾಕ್ಗಳನ್ನು ನಕ್ಷೆಯಲ್ಲಿ ಗುರುತಿಸಿ ಈ ಬಗ್ಗೆ ಮುಖ್ಯ ಕಚೇರಿಗೆ ವರದಿ ಕೊಡುವಂತೆ ಸೂಚಿಸಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಿ.ರಣದೀಪ್ರವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಆ ಬ್ಲಾಕ್ಗಳನ್ನು ನಿರ್ವಹಿಸಲು ಕೇಂದ್ರಿಕೃತ ಜಾಗೃತಿ ಮತ್ತು IEC(ಮಾಹಿತಿ, ಶಿಕ್ಷಣ, ಸಂವಹನ) ತಂತ್ರವನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ ದಕ್ಷಿಣ ವಲಯವು 1,128 ಕುಟುಂಬಗಳು ಲಸಿಕೆ ಪಡೆಯದೆ ಮೊದಲನೇ ಸ್ಥಾನದಲ್ಲಿದರೆ, ಪಶ್ಚಿಮ ವಲಯದಲ್ಲಿ 780 ಕುಟುಂಬಗಳು ಲಸಿಕೆ ಪಡೆದಿಲ್ಲ ಎಂಬುದನ್ನು ಬಿಬಿಎಂಪಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.