ಸಾಕಷ್ಟು ವಿರೋಧಗಳ ನಡುವೆಯೂ ಎನ್ಹೆಚ್ಎಐ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಟೋಲ್ ದರ ಏರಿಕೆ ಮಾಡಿದ್ದು ವಾಹನ ಸವಾರರ ಜೇಬಿಗೆ ಮತ್ತೊಂದು ಬರೆ ಬಿದ್ದಂತಾಗಿದೆ. ಟೋಲ್ ಸಂಗ್ರಹ ಆರಂಭಗೊಂಡು ಕೇವಲ 17 ದಿನಗಳಲ್ಲಿ ಟೋಲ್ ದರ ಮತ್ತೆ ಏರಿಕೆಯಾದಂತಾಗಿದೆ.
ಟೋಲ್ ದರವನ್ನು ಶೇಕಡಾ 22 ರಷ್ಟು ಏರಿಕೆ ಮಾಡಲಾಗಿದ್ದು ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇ ಸಂಚಾರ ಮತ್ತಷ್ಟು ದುಬಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮದ ಅಡಿಯಲ್ಲಿ ಈ ದರ ಏರಿಕೆ ಮಾಡಲಾಗಿದ್ದು ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮಾರ್ಚ್ 14ರಿಂದ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹ ಆರಂಭಗೊಂಡಿತ್ತು. ಇದೀಗ ಕೇವಲ 17 ದಿನಗಳಲ್ಲಿ ಈ ದರವನ್ನು ಪರಿಷ್ಕರಣೆ ಮಾಡಲಾಗಿದೆ.
ಇಂದಿನ ಪರಿಷ್ಕತ ದರದ ವಿವರ :
ಕಾರು/ವ್ಯಾನ್/ಜೀಪ್: ಏಕಮುಖ ಸಂಚಾರ 165 ರೂ(30ರೂ ಹೆಚ್ಚಳ). ದ್ವಿಮುಖ ಸಂಚಾರ – 250 ರೂ(45ರೂ ಹೆಚ್ಚಳ).
ಲಘು ವಾಹನಗಳು/ಮಿನಿಬಸ್: 270 ರೂ.(50ರೂ ಹೆಚ್ಚಳ) ದ್ವಿಮುಖ ಸಂಚಾರ -405 ರೂ.(75 ರೂ. ಹೆಚ್ಚಳ)
ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನ – 565 ರೂ(165 ರೂ ಹೆಚ್ಚಳ), ದ್ವಿಮುಖ ಸಂಚಾರ – 850 ರೂ(160 ರೂ.ಹೆಚ್ಚಳ)
ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: ಏಕಮುಖ ಸಂಚಾರ 615 ರೂ.(115ರೂ ಹೆಚ್ಚಳ), ದ್ವಿ ಮುಖಸಂಚಾರ – 925 ರೂ.( 225 ರೂ.ಹೆಚ್ಚಳ)
ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ ಮೂವರ್ಸ್/4-6 ಆಕ್ಸೆಲ್ ವಾಹನಗಳು: 885 ರೂ.(165ರೂ ಹೆಚ್ಚಳ) ದ್ವಿಮುಖ ಸಂಚಾರ – 1,330 ರೂ. ಹೆಚ್ಚಳ(250ರೂ ಹೆಚ್ಚಳ)
7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು: 1,080 ರೂ.(200ರೂ ಹೆಚ್ಚಳ) ದ್ವಿಮುಖ ಸಂಚಾರ – 1,620 ರೂ.( 305 ರೂ.ಹೆಚ್ಚಳ)