ರಾಜಧಾನಿಯ ವಾಹನಸವಾರರಲ್ಲಿ ಡ್ರಂಕ್ ಅಂಡ್ ಡ್ರೈವ್ ಪ್ರಮಾಣ ತಿವ್ರ ಇಳಿಕೆಯಾಕಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಹೇಳಿದ್ದಾರೆ.

ಕಳೆದ ವರ್ಷದಿಂದ ಮಧ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ನಿಮ್ಹಾನ್ಸ್ ಹಾಗೂ ಟ್ರಾಫಿಕ್ ಪೊಲೀಸರ ಜಂಟಿ ಸರ್ವೆಯಲ್ಲಿ ಅಂಶ ಬಹಿರಂಗವಾಗಿದೆ.

ಸತತ ಕಾರ್ಯಾಚರಣೆಯ ಮೂಲಕ ಹಗಲು ರಾತ್ರಿಯೆನ್ನದೇ ಟ್ರಾಫಿಕ್ ಪೊಲೀಸರು ಕುಡಿದು ವಾಹನ ಚಾಲನೆ ಮಾಡಿದವರ ಅಡ್ಡಗಟ್ಟಿ ದಂಡ ಹಾಕಿರುವುದೇ ಕೇಸ್ ಗಳ ಗಣನೀಯ ಇಳಿಕೆಗೆ ಕಾರಣ ಎನ್ನಲಾಗಿದೆ.