ಕಂಠಪೂರ್ತಿ ಕುಡಿದು ಗಲಾಟೆ ಮಾಡ್ತಿದ್ದವರನ್ನ ಪ್ರಶ್ನೆ ಮಾಡಿದ್ದಕ್ಕೆ ಮಂಬಂದಂತೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ತುಂಗಾನಗರದಲ್ಲಿ ನಡೆದಿದೆ. ಸದ್ಯ ಇಬ್ಬರಿಗೂ ಐಸಿಯೂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುಂಡರ ಗ್ಯಾಂಗ್ ಒಂದು ರಾತ್ರಿ ಸಮಯ ಮನೆಮುಂದೆ ಕುಡಿದು ಗಲಾಟೆ ಮಾಡ್ತಿದ್ದ ವೇಳೆ, ಇದನ್ನ ಸ್ಥಳೀಯ ನಿವಾಸಿಗಳು ಪ್ರಶ್ನೆ ಮಾಡಿದ್ದು, ಈ ವೇಳೆ ಆ ವ್ಯಕ್ತಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಲಾಗಿದೆ.
ಇದನ್ನ ತಡೆಯಲು ಬಂದ ಪತ್ನಿ ಮೇಲೂ ಹಲ್ಲೆ ನಡೆಸಲಾಗಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ನೋ ಯೂಸ್ ಎನ್ನುವಂತಾಗಿದೆ. ದೂರು ನೀಡಿದ್ರೂ ಕೇಸ್ ದಾಖಲಿಸಲು ಹಿಂದೇಟು ಹಾಕ್ತಿದ್ದಾರಂತೆ ಪೊಲೀಸ್ರು ಎಂಬ ಆರೋಪ ಕೇಳಿಬಂದಿದೆ.