ಚೆನೈ-ಬೆಂಗಳೂರು-ಮೈಸೂರು ನಡುವಿನ ಹೈಸ್ಪೀಡ್ ರೈಲು ಯೋಜನೆಯನ್ನು ತ್ವರಿತ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಚೊಚ್ಚಲ ಬಜೆಟ್ ಮಂಡಿಸಿದ ಬೊಮ್ಮಾಯ, ಕೇಂದ್ರ ಸರ್ಕಾರವು 460 ಕಿ.ಮೀ ಉದ್ದದ ರೈಲ್ವೇ ಕಾರಿಡರ್ ಅನ್ನು ನಿರ್ಮಿಸಲು ನ್ಯಾಷನಲ್ ಹೈ ಸ್ಪೀಡ್ ರೈಲ್ವೆ ಪ್ರಾಜೆಕ್ಟ್(NHSRP) ಯೋಜನೆಯ ವಿಸ್ತ್ರೃತ ವರದಿಯನ್ನು ಸಿದ್ದಪಡಿಸುತ್ತಿದ್ದು ಈ ಯೋಜನೆಯನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುವುದು ಎಂದು ಚೊಚ್ಚಲ ಬಜೆಟ್ ಮಂಡಿಸಿದ ನಂತರ ಬೊಮ್ಮಾಯಿ ತಿಳಿಸಿದ್ದಾರೆ.