ಬೆಂಗಳೂರು (Bengaluru): ಬೇಸಿಗೆ ಎಲ್ಲರನ್ನೂ ಹೈರಾಣಾಗಿಸುತ್ತಿದೆ. ಬೆಂಗಳೂರಿನಲ್ಲಿ ಅವಧಿಗೂ ಮೊದಲೇ ಬೇಸಿಗೆ ಝಳ ಹೆಚ್ಚಾಗಿದ್ದು, ನಾಲ್ಕು ವರ್ಷದ ದಾಖಲೆಯನ್ನು ಮುರಿದಿದೆ.
ಅವಧಿಗೂ ಮೊದಲೇ ಬೆಂಗಳೂರಿನಲ್ಲಿ ಬೇಸಿಗೆ ಆರಂಭವಾಗಿದ್ದು, ತಾಪಮಾನ ದಿಢೀರ್ ಏರಿಕೆಯಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಮಾರ್ಚ್ 1 ರ ಬದಲಿಗೆ ಫೆಬ್ರವರಿ 24 ರಿಂದಲೇ ಬೇಸಿಗೆ ಆರಂಭವಾಗಿದೆ. ಇನ್ನು ತಾಪಮಾನ ದಿಢೀರ್ ಏರಿಕೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯೊಂದಿಗೆ ಶುಷ್ಕ ಹವಾಮಾನದ ಮುನ್ಸೂಚನೆ ಇದೆ.
ಈ ನಡುವೆ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಇನ್ನು ಒಂದು ನೀರಿನ ಟ್ಯಾಂಕರ್ ಗೆ 1,500 ರಿಂದ 2,000 ರೂಪಾಯಿ ಕೊಡಬೇಕಿದೆ.
#karnataka #bengaluru #temperature #heatwaves #bengaluduweather