ಇತ್ತೀಚೆಗೆ ಬೆಂಗಳೂರಿನ ಆಟೋ ಡ್ರೈವರ್ (Bangalore auto driver) ಒಬ್ಬರ ದುರ್ವರ್ತನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social media) ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪ್ರಯಾಣಿಕರ ಮೇಲೆ ಆಟೋ ಡ್ರೈವರ್ ದರ್ಪ ಮೆರೆದಿರುವ ವಿಡಿಯೋ ಇದಾಗಿದ್ದು, ಸಾಕಷ್ಟು ಟೀಕೆಗೆ ಕಾರಣವಾಗಿತ್ತು.

ಹಿಂದಿ ಮಾತನಾಡುವ ಮಹಿಳಾ ಪ್ರಯಾಣಿಕರ ಮೇಲೆ ಈ ಆಟೋ ಡ್ರೈವರ್ ಸಣ್ಣ ವಿಚಾರಕ್ಕೆ ದೊಡ್ಡ ಕಿರಿಕ್ ತೆಗೆದು ಗೂಂಡಾ ವರ್ತನೆ ತೋರಿದ್ದ. ಮಹಿಳೆ ವಿಡಿಯೋ ರೆಕಾರ್ಡ್ ಮಾಡಿ ಪೊಲೀಸರಿಗೆ ದೂರು ಕೊಟ್ಟಿದ್ದರು ಮಾತ್ರವಲ್ಲದೆ, ಸಾಮಾಹಿಕ ಜಾಲತಾಣದಲ್ಲಿ ಕೂಡ ವಿಡಿಯೋ ಹರಿಬಿಟ್ಟಿದ್ದು.
ಈ ಬಗ್ಗೆ ದೇಶದಾದ್ಯಂತ ಇಂಟರ್ನೆಟ್ ನಲ್ಲಿ (Internet) ಚರ್ಚೆ ಜೋರಾಗಿತ್ತು. ಪದೇ ಪದೇ ಬೆಂಗಳೂರಿನ ಆಟೋ ಡ್ರೈವರ್ ಗಳ ಇಂಥ ವರ್ತನೆಗಳು ಆತಂಕಕ್ಕೆ ಕಾರಣವಾಗಿದ್ದು, ಆಟೋ ಚಾಲಕರು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆಗಳು ವರದಿಯಾಗಿದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಆಟೋ ಡ್ರೈವರ್ ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು.
ಇದೀಗ ಈ ರೀತಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಲು ಯತ್ನಿಸಿ ದುರ್ವರ್ತನೆ ತೋರಿದ ಆಟೋ ಚಾಲಕನನ್ನ ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಭಂದಪಟ್ಟಂತೆ ಆಟೋ ಚಾಲಕನನ್ನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆ (Police department) ಮಾಹಿತಿ ನೀಡಿದೆ.