ಬಾಳೆಹಣ್ಣನ್ನು ಹೆಚ್ಚು ಜನ ಇಷ್ಟಪಟ್ಟು ತಿನ್ನುತ್ತಾರೆ ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬಾಳೆ ಎಲೆಯಲ್ಲಿಯೂ ಸಾಕಷ್ಟು ಪ್ರಯೋಜನವಿದೆ. ಬಾಳೆ ಎಲ ಊಟವನ್ನು ಮಾಡುವುದರಿಂದ ರುಚಿ ಹೆಚ್ಚಾಗುವುದು ಮಾತ್ರವಲ್ಲದೆ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಅಂಶಗಳು ನಮ್ಮ ದೇಹಕ್ಕೆ ಒದಗುತ್ತದೆ.. ಅಡುಗೆಯನ್ನು ಮಾಡಲು ಕೂಡ ಬಳಸುತ್ತಾರೆ. ಹಾಗೂ ಕಾರ್ಯಗಳನ್ನು ಕೂಡ ಬಾಳೆಯಲೆಯನ್ನ ಬಳಸಲಾಗುತ್ತದೆ. ಇದೆಲ್ಲವೂ ಸರಿ ಇನ್ನು ಬಾಳೆ ಮರದಿಂದ ನಮಗೆ ಇನ್ನೊಂದು ಪ್ರಯೋಜನ ಇದೆ,ಬಾಳೆ ಮರದಲ್ಲಿ ಸಿಗುವಂತಹ ದಿಂಡಿನಿಂದ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಒದಗುತ್ತದೆ. ಆದ್ರೆ ಕೆಲವರು ಬಾಳೆ ಮರವನ್ನ ಹಾಗೆ ಬಿಟ್ಟುಬಿಡುತ್ತಾರೆ,ಅದು ಒಣಗಿ ಬಿದ್ದು ಹೋಗುತ್ತದೆ.
ಆದರೆ ಅದರಲ್ಲಿ ಇರುವಂತಹ ದಿಂಡಿನಿಂದ ನಮ್ಮ ದೇಹಕ್ಕೆ ಪೊಟ್ಯಾಶಿಯಂ, ಮೆಗ್ನೀಷಿಯಂ ,ವಿಟಮಿನ್ ಬಿ6 , ಕಬ್ಬಿಣ, ಕಾರ್ಬೋಹೈಡ್ರೇಟ್ ಗಳು, ಫೈಬರ್ , ತಾಮ್ರ, ವಿಟಮಿನ್ ಸಿ ಹಾಗೂ ಸೂಕ್ಷ್ಮ ಪೋಷಕಾಂಶಗಳು ದೊರೆಯುತ್ತದೆ. ಇದೆಲ್ಲದರ ಜೊತೆಗೆ ಬಾಳೆ ದಿಂಡನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬುದರ ಮಾಹಿತಿ ಹೀಗಿದೆ.
ಹೈ ಬ್ಲಡ್ ಪ್ರೆಷರ್ ಗೆ ಉತ್ತಮ
ಬಾಳೆ ದಿಂಡಿನ ಪದಾರ್ಥವನ್ನು ಸೇವಿಸುವುದರಿಂದ ಇದರಲ್ಲಿ ಪೊಟಾಷಿಯಂ ಅಂಶ ಸಮೃದ್ಧಿಯಾಗಿದೆ. ಇದು ರಕ್ತದೊತ್ತಡದಲ್ಲಿನ ಏರಿಳಿತವನ್ನು ನಿಭಾಯಿಸಲು ಮುಖ್ಯ ಅಂಶವಾಗಿದೆ.. ಹೈ ಬಿಪಿ ಇದ್ದವರು ವಾರಕ್ಕೆ ಎರಡು ಬಾರಿ ಬಾಳೆದಿಂಡಿನ ಆಹಾರವನ್ನ ಸೇವಿಸುವುದರಿಂದ ರಕ್ತದೊತ್ತಡವನ್ನು ಪರಿಣಾಮಕಾರಿ ಆಗಿ ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ಹೃದಯ ರಕ್ತನಾಳದ ಅಸ್ವಸ್ಥತೆಗಳ ತೊಂದರೆಯನ್ನು ಕಡಿಮೆ ಮಾಡುತ್ತದೆ..
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ನಾನ ಕಾಯಿಲೆಗಳಿಗೆ ತುತ್ತಾಗುತ್ತೇವೆ. ಹಾಗಾಗಿ ವಾರಕ್ಕೆ ಎರಡು ಬಾರಿ ಬಾಳೆಯದಿಂಡಿನ ಜ್ಯೂಸ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನ ಪರಿಣಾಮಕಾರಿಯಾಗಿ ನಿವಾರಿಸುತ್ತದೆ ಹಾಗೂ ವಿಟಮಿನ್,ಕಬ್ಬಿಣ ಅಂಶ, ವಿಟಮಿನ್ ಬಿ 6 ಇರುವುದರಿಂದ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ.
ಜೀರ್ಣಕ್ರಿಯೆಗೆ ಉತ್ತಮ
ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಬಾಳೆದಿಂಡು ಪ್ರಮುಖ ಕಾರ್ಯವನ್ನ ನಿರ್ವಹಿಸುತ್ತದೆ.. ಹೊಟ್ಟೆಯಲ್ಲಿರುವ ವಿಷಕಾರಿ ಅಂಶವನ್ನ ತೆಗೆದುಹಾಕುವಲ್ಲಿ ತುಂಬಾನೇ ಸಹಾಯಕಾರಿ.. ಹಾಗೂ ಹೊಟ್ಟೆಯಲ್ಲಿ ಇರುವಂತಹ ಕೆಟ್ಟ ಅಂಶಗಳು ಅದರಲ್ಲೂ ಕೂದಲು ,ಕಲ್ಲು ಇಂತವು ಆಹಾರ ಜೊತೆ ಸೇರಿಕೊಂಡಿದ್ದರೆ ಅವುಗಳನ್ನು ತಕ್ಷಣಕ್ಕೆ ಹೊರಗೆ ಹಾಕುವುದಕ್ಕೆ ಸಹಾಯಮಾಡುತ್ತದೆ.
ಇದೆಲ್ಲದರ ಜೊತೆಗೆ ಪಿಸಿಓಎಸ್ ಸಮಸ್ಯೆ ನಿವಾರಣೆಯಾಗುತ್ತದೆ, ಹಾಗೂ ಮುಟ್ಟಿನ ಸಂದರ್ಭದಲ್ಲಿ ಅತಿಯಾದ ರಕ್ತಸಾವ ಆಗುತ್ತಿದ್ದರೆ ಇದನ್ನು ಕೂಡ ನಿವಾರಣೆ ಮಾಡುತ್ತದೆ.