ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಅಮೂಲ್ಯ. ಆ ಬಾಲ್ಯದ ದಿನಗಳು ಹೇಗಿರಬೇಕು? ಮಕ್ಕಳ ಬಾಲ್ಯದ ದಿನಗಳಲ್ಲಿ ಪೋಷಕರ ಪಾತ್ರ ಏನು? ಎಂಬ ವಿಷಯಗಳನ್ನು ತಿಳಿಸುವ “ಬಾಲ್ಯ” ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

ಸತ್ಯನಾರಾಯಣಾಚಾರ್ ನಿರ್ಮಾಣದ ಈ ಚಿತ್ರವನ್ನು ವಿ.ಎಂ.ರಾಜು(Sulthan Raju) ನಿರ್ದೇಶಿಸಿದ್ದಾರೆ. ವಿ.ಎಂ.ರಾಜು(VM Raju), ಬಿ.ಪಟೇಲಪ್ಪ(B Patelappa) ಅವರು ಸೇರಿದಂತೆ ಅನೇಕ ಸ್ನೇಹಿತರು ಸೇರಿ “ಬಾಲ್ಯ”ದ ಕಥೆ ಬರೆದಿದ್ದಾರೆ.

ನಾರಾಯಣಸ್ವಾಮಿ(Narayanaswamy), ನಿಶ್ಚಿತ(Nishchitha), ಬುಲೆಟ್ ವಿನೋದ್(Bullet Vinod), ಅಪ್ಸರ(Apsara), ಮಾಸ್ಟರ್ ಮನೀಶ್, ಮಾಸ್ಟರ್ ಆರ್ಯನ್, ಮಾಸ್ಟರ್ ದಕ್ಷಿತ್, ಕುಮಾರಿ ದೀಕ್ಷ ಮುಂತಾದವರು “ಬಾಲ್ಯ” ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇಂದು ವಿಶ್ವನಾಥ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ನೀಲ್ ಕೆಂಗಾಪುರ್ ಬರೆದಿದ್ದಾರೆ. ಲಕ್ಮಣ್ ರೆಡ್ಡಿ ಸಂಕಲನ ಹಾಗೂ ರಮೇಶ್ ಕೊಯಿರಾ ಅವರ ಛಾಯಾಗ್ರಹಣವಿರುವ “ಬಾಲ್ಯ” ಚಿತ್ರಕ್ಕೆ ಎ.ಟಿ.ರವೀಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ.