ಇದೇ ಮೇ 10ರಂದು 2023ರ ಕರ್ನಾಟಕ ವಿಧಾನಸಭೆ ಚುನಾವಣೆ(karnataka assembly election 2023) ನಡೆಯಲಿದೆ. ರಾಜ್ಯದಲ್ಲಿ ಈಗಾಗಲೇ ಚುನಾವಣಾ ರಣಕಹಳೆ ಮೊಳಗಿದ್ದು, ಈಗಾಗಲೇ ರಾಜಕೀಯ ನಾಯಕರು ಅಖಾಡಕ್ಕಿಳಿದು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(prime minister narendra modi) ಇಂದು ಮಂಗಳೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಬಜರಂಗಬಲಿ ಕೀ ಜೈ (Jai Bajrangbali) ಎಂದು ಆರಂಭದಲ್ಲಿ ಹೇಳಿ ಭಾಷಣ ಮಾಡಿದ್ರು.
ಪ್ರತಿ ಚುನಾವಣಾ(election) ಭಾಷಣದಲ್ಲಿ ಮೋದಿ ಆರಂಭದಲ್ಲಿ ಭಾರತ್ ಮಾತಾ ಕೀ ಜೈ ಎಂದು ಹೇಳಿ ಭಾಷಣ ಮಾಡುತ್ತಿದ್ದಾರೆ. ಅದೇ ರೀತಿ ಇಂದು ಮೂಲ್ಕಿ ಪ್ರಚಾರ(campaign) ಸಭೆಯಲ್ಲಿ ಭಾರತ್ ಮಾತಾಕೀ ಜೈ ಎಂದು ಹೇಳಿದ ಬಳಿಕ ತುಳುವಿನಲ್ಲಿ ಮಾತನ್ನು ಆರಂಭಿಸಿದರು. ತುಳು ಅಪ್ಪೆನಾ ಮೋಕೆದಾ ಜೊಕುಲೆಗೂ ಸೊಲ್ಮೆಲ್ ಅಂದೆರೆ ತುಳು ತಾಯಿಯ ಪ್ರೀತಿ ಮಕ್ಕಳಿಗೆ ನಮಸ್ಕಾರಗಳು ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ(narendra modi) ಭಾಷಣ ಆರಂಭಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ(pm narendra modi) ಹಿಂದಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಲು ದಕ್ಷಿಣ ಕನ್ನಡ ಬಿಜೆಪಿ(BJP) ಮುಂದಾಗಿತ್ತು. ಆದರೆ ನೆರೆದಿದ್ದ ಸಭಿಕರು ಕನ್ನಡ ಭಾಷಾಂತರ ಬೇಡ ಎಂದು ಹೇಳಿದರು. ಇದಕ್ಕೆ ಸಂತಸ ವ್ಯಕ್ತಪಡಿಸಿದ ಮೋದಿ ಹಿಂದಿಯಲ್ಲಿ ಭಾಷಣ ಮುಂದುವರಿಸಿದ್ರು. ಆರಂಭದಲ್ಲಿ ಪರುಶುರಾಮ ಕ್ಷೇತ್ರ, ಮೂಲ್ಕಿ ವೆಂಕಟರಣ ದೇವಸ್ಥಾನ, ನಾರಾಯಣ ಗುರು, ತೀರ್ಥಂಕರನ್ನು ಉಲ್ಲೇಖಿಸಿ ಭಾಷಣ ಮುಂದುವರಿಸಿದರು.