ಚಿಕ್ಕ ಮಕ್ಕಳಿಗೆ ಬೇಗನೆ ದೃಷ್ಟಿ ತಗುಲುತ್ತದೆ..ಆ ಸಂದರ್ಭದಲ್ಲಿ ಮಕ್ಕಳ ಹಾವಭಾವದಲ್ಲಿ ವ್ಯತ್ಯಾಸ ಇರುತ್ತೆ.. ಮಕ್ಕಳು ಕಾರಣವಿಲ್ಲದೆ ಅಳೋದಕ್ಕೆ ಶುರು ಮಾಡ್ತಾರೆ, ಸುಮ್ಮನೆ ರಗಳೆ ಮಾಡ್ತಾರೆ, ಕೀಟಲೆ, ಸಮಾಧಾನ ಇರೋದಿಲ್ಲ ಊಟ ತಿಂಡಿಯನ್ನು ಕೂಡ ಸರಿಯಾಗಿ ಮಾಡಲ್ಲ, ಇದ್ದಕಿದ್ದ ಹಾಗೆ ಜ್ವರ ಅಥವಾ ಹೊಟ್ಟೆ ನೋವು ವಾಂತಿ ಎಲ್ಲವೂ ಶುರುವಾಗತ್ತೆ..

ಕೆಲವರ ಕಣ್ಣೋಟ ಸರಿ ಇರುವುದಿಲ್ಲ..ಅಂಥವರು ಮಕ್ಕಳನ್ನು ನೋಡಿದಾಗ ಹಾಗೂ ಮಕ್ಕಳ ಬಗ್ಗೆ ಏನ್ ಆದ್ರು ಪಾಸಿಟಿವ್ ಆಗಿ ಮಾತಾಡಿದ್ರೆ ಬೇಗ ದೃಷ್ಟಿ ತಾಗುತ್ತದೆ..ಹೆಚ್ಚಿನ ಜನ ಇದನ್ನ ನಂಬುತ್ತಾರೆ ಆದ್ರೆ ಕೆಲವರು ಇದು ಮೂಡನಂಬಿಕೆ ಅಂತ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ.

ವೀಳ್ಯದೆಲೆ
ದೃಷ್ಟಿ ತಾಗಿದಾಗ ಒಂದು ವೀಳ್ಯದೆಲೆಯಲ್ಲಿ ಕಣ್ಣು ಮತ್ತು ಬಾಯಿಯನ್ನು ಮಾಡಿ ಮಕ್ಕಳಿಗಾಗಲಿ ದೊಡ್ಡವರಿಗಾಗಲಿ ತಲೆಯಿಂದ ಕಾಲಿನವರೆಗೂ ಮೂರು ಬಾರಿ ನೀವುಳಿಸಿ ನಂತರ ಅದನ್ನು ಬೆಂಕಿಯಲ್ಲಿ ಸುಟ್ಟು ಅದರ ಕಪ್ಪು ಗಂಧವನ್ನ ಹಣೆಗೆ ಇಡೋದ್ರಿಂದ ದೃಷ್ಟಿ ಬೇಗನೆ ಹೋಗುತ್ತದೆ.

ಸಾಸಿವೆ
ಮಕ್ಕಳಿಗೆ ದೃಷ್ಟಿತಾಗಿ ತುಂಬಾನೇ ಅಳುತ್ತಾ ಕೀಟಲೆ ಮಾಡ್ತಾ ಇದ್ರೆ ಒಂದು ಸ್ಪೂನ್ ಅಷ್ಟು ಸಾಸಿವೆಯನ್ನು ತಕೊಂಡು ಅದಕ್ಕೆ ಕಲ್ಲುಪ್ಪನ್ನು ಬೆರೆಸಿ ಮಕ್ಕಳ ತಲೆಯಿಂದ ಕಾಲಿನವರೆಗೂ ಮೂರು ಬಾರಿ ನೀವಳಿಸಿ ಅದನ್ನ ಬೆಂಕಿಗೆ ಹಾಕಿದರೆ ದೃಷ್ಟಿ ಬೇಗನೆ ನಿವಾರಣೆ ಆಗುತ್ತೆ.

ಜೀರಿಗೆ
ದೃಷ್ಟಿ ತಾಗಿದಾಗ ಜೀರಿಗೆಯನ್ನ ನಿವಾಳಿಸುವುದು ತುಂಬಾನೇ ಒಳ್ಳೆಯದು. ಒಂದು ಟೇಬಲ್ ಸ್ಪೂನ್ ಅಷ್ಟು ಜೀರಿಗೆಯನ್ನ ತಲೆಯಿಂದ ಕಾಲಿನವರೆಗೂ ನಿವಾಳಿಸಿ ನಂತರ ಅದನ್ನು ಹೊರಗೆ ಎಸೆಯಬೇಕು. ಇಲ್ಲವಾದರೆ ಅರ್ಧ ಟೇಬಲ್ ಸ್ಪೂನ್ ನಷ್ಟು ಜೀರಿಗೆ ಸೇವನೆಯನ್ನು ಮಾಡುವುದರಿಂದ ಕೂಡ ದೃಷ್ಟಿ ಬೇಗನೆ ನಿವಾರಣೆ ಆಗುತ್ತೆ.

ಕೆಂಪು ನೀರು
ಮಕ್ಕಳಿಗೆ ದೃಷ್ಟಿ ತಾಗಿದಾಗ ಒಂದು ತಟ್ಟೆಯಲ್ಲಿ ಸುಣ್ಣದ ನೀರನ್ನ ಮಾಡಿಕೊಂಡು ಅದಕ್ಕೆ ಸ್ವಲ್ಪ ಅರಿಶಿಣ ಹಾಕಿ ನಿವಾಳಿಸಬೇಕು. ನಂತರ ಸುಣ್ಣ ಮತ್ತು ಅರಿಶಿನದ ನೀರು ಕೆಂಪಾಗೊದಕ್ಕೆ ಶುರುವಾಗುತ್ತೆ, ಎಷ್ಟು ಕೆಂಪಾಗುತ್ತೋ ಅಷ್ಟು ದೃಷ್ಠಿಯಾಗಿದೆ ಎಂದರ್ಥ ,ಈ ನೀರನ್ನ ಮನೆಯಿಂದ ಹೊರಗೆ ಚೆಲ್ಲುತ್ತಾರೆ.

ಒಟ್ಟಿನಲ್ಲಿ ಮಕ್ಕಳಿಗೆ ಅಥವಾ ದೊಡ್ಡವರಿಗೆ ದೃಷ್ಟಿ ತಾಗಿದಾಗ ಒಂದು ಆರೋಗ್ಯ ಸಮಸ್ಯೆ ಆಗುತ್ತದೆ ಇಲ್ಲವಾದಲ್ಲಿ ಅವರ ಹಾವಭಾವದಲ್ಲಿ ಚೇಂಜಸ್ ಇರುತ್ತದೆ..ತಕ್ಷಣವೇ ದೃಷ್ಟಿ ತೆಗೆದರೆ ಉತ್ತಮ..
