• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ನನ್ನ ಮಗಳೇ ಸೂಪರ್ ಸ್ಟಾರ್” ಚಿತ್ರದ ಪ್ರಮುಖಪಾತ್ರದಲ್ಲಿ “ಸೀತಾರಾಮ” ಸೀರಿಯಲ್ ನ ಬೇಬಿ ರೀತುಸಿಂಗ್ ನಟನೆ.

ಪ್ರತಿಧ್ವನಿ by ಪ್ರತಿಧ್ವನಿ
September 9, 2025
in Top Story, ಅಂಕಣ, ಇದೀಗ, ಕರ್ನಾಟಕ, ವಾಣಿಜ್ಯ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ “ಸೀತಾರಾಮ” ಸೀರಿಯಲ್ ನ ಮೂಲಕ ನೋಡುಗರ ಮನ ಗೆದ್ದಿದ್ದ ಬೇಬಿ ರೀತು ಸಿಂಗ್ ಈಗ “ನನ್ನ ಮಗಳೇ ಸೂಪರ್ ಸ್ಟಾರ್” ಎಂಬ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಶೇಷಾದ್ರಿಪುರದ ಎ.ವಿ.ವರದಾಚಾರ್ ಕಲಾಕ್ಷೇತ್ರದಲ್ಲಿ ನೆರವೇರಿತು. ಸಾಹಿತಿ ಬಿ.ಆರ್ ಲಕ್ಷ್ಮಣರಾವ್, ಪರಿಸರ ಪ್ರೇಮಿ ರೇವತಿ ಕಾಮತ್ ಹಾಗೂ ನಿರ್ದೇಶಕ ನಂಜುಂಡೇಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು.

ADVERTISEMENT

ಹನಿ ಫಿಲಂ ಮೇಕರ್ಸ್ ಲಾಂಛನದಲ್ಲಿ ಎನ್ ಎ.ಶಿವಕುಮಾರ್ (ಕುಮಾರ್ ನೊಣವಿನಕೆರೆ) ನಿರ್ಮಿಸುತ್ತಿರುವ ಈ ಚಿತ್ರವನ್ನು ಹಲವು ಚಿತ್ರಗಳಿಗೆ ಸಂಕಲನಕಾರರಾಗಿ‌ ದುಡಿದಿರುವ ಆಯುರ್ ನಿರ್ದೇಶಿಸುತ್ತಿದ್ದಾರೆ. ರೀತುಸಿಂಗ್, “ಭಜರಂಗಿ ೨” ಖ್ಯಾತಿಯ ‌ಚಲುವರಾಜ್, ಸಂಭ್ರಮಶ್ರೀ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಹೂರ್ತ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಅಪ್ಪ – ಅಮ್ಮನಿಗೆ‌ ತಮ್ಮ ಮಕ್ಕಳು ಸೂಪರ್ ಸ್ಟಾರ್ ಆಗಬೇಕೆಂಬ ಕನಸು. ಜೊತೆಗೆ ತಾವು ಅಂದುಕೊಂಡಂತೆ ಅವರು ಇರಬೇಕು ಎಂಬ ಆಸೆ. ಅದರಲ್ಲೂ ಈ ಸ್ವಭಾವ ತಾಯಿಗೆ ಸ್ವಲ್ಪ ಹೆಚ್ಚು. ಆದರೆ ಮಕ್ಕಳಿಗೂ ಅವರದೇ ಆಸೆ ಇರುತ್ತದೆ. ನಿಮ್ಮ ಆಸೆಯನ್ನು ಅವರ ಮೇಲೆ ಬಲವಂತವಾಗಿ ಅವರ ಮೇಲೆ ಹೇರಬೇಡಿ. ಅದರಿಂದ ಮಕ್ಕಳು ಏನೆಲ್ಲಾ ತೊಂದರೆ ಅನುಭವಿಸುತ್ತಾರೆ ಎಂಬ ಅಂಶವೇ ಈ ಚಿತ್ರದ ಕಥಾಹಂದರ. ರಿಯಾಲಿಟಿ ಶೋ ಕಥೆ ಕೂಡ ಇದೆ. ಇಂದು ಮುಹೂರ್ತ ನಡೆದಿದೆ. ಬೆಂಗಳೂರಿನಲ್ಲೆ ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ನಮ್ಮ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರು ಹಾಡುಗಳನ್ನು ಬಿ.ಆರ್.ಲಕ್ಷ್ಮಣರಾವ್ ಅವರೆ ಬರೆದಿದ್ದಾರೆ. ಕೆವಿನ್ ಸಂಗೀತ ನೀಡಿದ್ದಾರೆ. ಇನ್ನೂ ಈವರೆಗೂ ಸಾಕಷ್ಟು ಚಿತ್ರಗಳಿಗೆ ಸಂಕಲನ ಮಾಡಿರುವ ನಾನು, ಈ ಚಿತ್ರದ ಮೂಲಕ ನಿರ್ದೇಶಕನಾಗುತ್ತಿದ್ದೇನೆ ಎಂದು ನಿರ್ದೇಶಕ ಆಯುರ್ ತಿಳಿಸಿದರು.

ಈವರೆಗೂ ವಿಲನ್ ಪಾತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದ ನಾನು ಈ ಚಿತ್ರದ ಮೂಲಕ‌ ನಾಯಕನಾಗುತ್ತಿದ್ದೇನೆ ಹಾಗೂ ಈವರೆಗೂ ಮಾಡಿರದ ಪಾತ್ರ ಮಾಡುತ್ತಿದ್ದೇನೆ ಎಂದರು ನಟ ಚಲುವರಾಜ್. ನಿರ್ದೇಶಕರು ಹೇಳಿದ ಹಾಗೆ ಪೋಷಕರು ಹಾಗೂ ಮಕ್ಕಳು ನೋಡಲೇ ಬೇಕಾದ ಚಿತ್ರವಿದು. ನಾನು ಈ ಚಿತ್ರದ ನಾಯಕಿ. ಬೇಬಿ ರೀತುಸಿಂಗ್ ತಾಯಿಯಾಗಿ ಅಭಿನಯಿಸುತ್ತಿದ್ದೇನೆ ಎಂದು ನಟಿ ಸಂಭ್ರಮಶ್ರೀ ಹೇಳಿದರು.

ಬಹಳ ದಿನಗಳ ನಂತರ ಚಲನಚಿತ್ರಕ್ಕೆ ಹಾಡು ಬರೆದಿದ್ದೇನೆ. ಅದರಲ್ಲೂ ಈ ಚಿತ್ರದ ಮೂರು ಹಾಡುಗಳನ್ನು ನಾನೇ ಬರೆದಿದ್ದೇನೆ ಎಂದು ಸಾಹಿತಿ ಬಿ.ಆರ್ ಲಕ್ಷ್ಮಣರಾವ್ ಹೇಳಿದರು.

ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು. ನಾನು ಕೂಡು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದರು ಪರಿಸರ ಪ್ರೇಮಿ ರೇವತಿ ಕಾಮತ್.

ಹಿಂದಿನಿಂದ ನಮ್ಮ ಚಿತ್ರಗಳಿಗೆ ನೀವು ನೀಡುತ್ತಿರುವ ಪ್ರೋತ್ಸಾಹ ಈ ಚಿತ್ರದಲ್ಲೂ ಮುಂದುವರೆಯಲಿ ಎಂದು ನಿರ್ಮಾಪಕ ಎನ್ ಎ ಶಿವಕುಮಾರ್ ತಿಳಿಸಿದರು. ಮಾಧವಾನಂದ, ಪ್ರತಿಭಾ ಸಂಶಿಮಠ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags: A V VaradacharB R Lakshmana RaoBajarangi-2Honey Film MakersN A ShivakumarNanjundegowdaNanna magale superstarRevathi KamathRithu singhSeetharama Serial
Previous Post

Darshan Case: ‘ನಂಗೆ ವಿಷ ಕೊಡಿ’; ನರಕಯಾತನೆ ತಾಳಲಾರದೆ ಜಡ್ಜ್​ ಎದುರು ದರ್ಶನ್ ಅಳಲು..

Next Post

ಈ ವಾರ ತೆರೆಗೆ ವಿಭಿನ್ನ ಕಥಾಹಂದರ ಹೊಂದಿರುವ “ನಿದ್ರಾದೇವಿ Next Door”.

Related Posts

ಕೋಗಿಲು ಒತ್ತುವರಿ ತೆರವು ವಿವಾದ: ಸಿಎಂ ಸಿದ್ದರಾಮಯ್ಯಗೆ ಸುದೀರ್ಘ ಪತ್ರ ಬರೆದ ಎನ್.ಆರ್ ರಮೇಶ್
Top Story

GBA Election 2026: ಟಿಕೆಟ್ ಆಕಾಂಕ್ಷಿಗಳ ದಿಕ್ಕು ತಪ್ಪಿಸದಿರಿ: ಸಿಎಂಗೆ ಎನ್‌.ಆರ್ ರಮೇಶ್‌ ಪತ್ರ

by ಪ್ರತಿಧ್ವನಿ
February 11, 2026
0

ಬೆಂಗಳೂರು :  ಬೆಂಗಳೂರು ಮಹಾನಗರ ಪಾಲಿಕೆಗಳ ಆಡಳಿತ ವ್ಯವಸ್ಥೆಗೆ ಅತ್ಯವಶ್ಯಕವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟ ನಂತರವಷ್ಟೇ ಮಹಾನಗರದ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಾಧ್ಯ...

Read moreDetails
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ

ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ

February 11, 2026
ICC-BCCI: ಅಣ್ತಮ್ಮಾಸ್‌ಗೆ ಮಂಡಿಯೂರಿದ ಐಸಿಸಿ- ಬಿಸಿಸಿಐ..?

ICC-BCCI: ಅಣ್ತಮ್ಮಾಸ್‌ಗೆ ಮಂಡಿಯೂರಿದ ಐಸಿಸಿ- ಬಿಸಿಸಿಐ..?

February 11, 2026
2027 ರವರೆಗೆ 99% ಉದ್ಯೋಗಗಳು ಕಣ್ಮರೆಯಾಗಬಹುದು, ಈ 5 ಉದ್ಯೋಗಗಳು ಮಾತ್ರ ಉಳಿಯಬಹುದು

2027 ರವರೆಗೆ 99% ಉದ್ಯೋಗಗಳು ಕಣ್ಮರೆಯಾಗಬಹುದು, ಈ 5 ಉದ್ಯೋಗಗಳು ಮಾತ್ರ ಉಳಿಯಬಹುದು

February 11, 2026
ಬೆಂಗಳೂರಿಗಾಗಿ ಕೆಂಪೇಗೌಡರ ಸೊಸೆ‌ ಲಕ್ಷ್ಮಿದೇವಿ ಮಾಡಿದ ಆತ್ಮತ್ಯಾಗ ಇದು!

ಬೆಂಗಳೂರಿಗಾಗಿ ಕೆಂಪೇಗೌಡರ ಸೊಸೆ‌ ಲಕ್ಷ್ಮಿದೇವಿ ಮಾಡಿದ ಆತ್ಮತ್ಯಾಗ ಇದು!

February 11, 2026
Next Post

ಈ ವಾರ ತೆರೆಗೆ ವಿಭಿನ್ನ ಕಥಾಹಂದರ ಹೊಂದಿರುವ "ನಿದ್ರಾದೇವಿ Next Door".

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada