ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಬಿ ರಮೇಶ್ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ಕಮಿಷನರ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮಿತ ಆಯುಕ್ತ ಡಾ. ಚಂದ್ರಗುಪ್ತರಿಂದ ಅಧಿಕಾರ ಹಸ್ತಾಂತರಿಸಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು ಮೈಸೂರಿಗರ ಹಾಗೂ ನಾಗರಿಕರ ಸಹಕಾರ ಅಗತ್ಯ ಎಂದ ನೂತನ ಆಯುಕ್ತ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವೆಡೆ ಕೆಲಸ ನಿರ್ವಹಿಸಿದ್ದೇನೆ ಮೈಸೂರಿನಲ್ಲಿ ಕೆಲಸ ನಿರ್ವಹಿಸಿರಲಿಲ್ಲ ಹೀಗಾಗಿ ನನಗೆ ಮೈಸೂರು ಹೊಸದು ಎಂದಿದ್ದಾರೆ.
ನಗರದಲ್ಲಿ ಯಾವ ವಿಭಾಗಕ್ಕೆ ಹೆಚ್ಚು ಒತ್ತು ನೀಡಬೇಕೆಂದು ನಮ್ಮ ಅಧಿಕಾರಗಳ ಸಭೆ ನಡೆಸುತ್ತೇನೆ ಸಭೆ ಬಳಿಕ ಎಲ್ಲಾ ಮಾಹಿತಿ ಪಡೆದು ಒತ್ತು ನೀಡುತ್ತೇನೆ ಎಂದು ತಿಳಿಸಿದ್ದಾರೆ.