ನಾಗೇಂದ್ರ (B Nagendra) ಅಪಾರ್ಟ್ಮೆಂಟ್ನಲ್ಲಿ ಇ.ಡಿ ಅಧಿಕಾರಿಗಳು (ED offiers) ಶೋಧ ಮುಂದುವರೆಸಿದ್ದಾರೆ. ಇದೀಗ ಹಣದ ಮೂಲದ ಬಗ್ಗೆ ಇ.ಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕ್ತಿದ್ದು, ಪ್ರತಿಯೊಂದು ಬ್ಯಾಂಕ್ ಡಿಟೇಲ್ಸ್ (Bank details) ಚೆಕ್ ಮಾಡ್ತಿದ್ದಾರೆ. ಜೊತೆಗೆ ನಾಗೇಂದ್ರ ಬ್ಯಾಂಕ್ ಖಾತೆ ಆಗಿರುವ ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ.

ಇನ್ನು ಬ್ಯಾಂಕ್ ಸಿಬ್ಬಂದಿಯನ್ನ ನಾಗೇಂದ್ರ ನಿವಾಸಕ್ಕೆ ಇ.ಡಿ ಅಧಿಕಾರಿಗಳು ಕರೆತಂದಿದ್ದಾರೆ. ಎರಡು ವಾಹನದಲ್ಲಿ ಬ್ಯಾಂಕ್ ಸಿಬ್ಬಂದಿ ನಾಗೇಂದ್ರ ಅಪಾರ್ಟಮೆಂಟ್ಗೆ ಆಗಮಿಸಿದ್ರು, ಸದ್ಯ ಬ್ಯಾಂಕ್ ಖಾತೆಯ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ.
ಶಾಸಕ ಬಸವನಗೌಡ ದದ್ದಲ್ (MLA Basanagowda daddal) ನಿವಾಸದಲ್ಲಿ ನಿನ್ನೆಯಿಂದ ಇ.ಡಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಸದ್ಯ ಇಂದು ಬೆಳಿಗ್ಗೆ ಇ.ಡಿ ಅಧಿಕಾರಿಗಳು ದದ್ದಲ್ ಕುಟುಂಬಸ್ಥರಿಗೂ ಸೇರಿಸಿ ಹೊರಗಿನಿಂದ ತಿಂಡಿ ತರಿಸಿಕೊಂಡಿದ್ರು. ಇನ್ನು ನಿನ್ನೆ ಬೆಳಗ್ಗೆ 7 ರಿಂದ ಸತತವಾಗಿ ದದ್ದಲ್ಗೆ ಇ.ಡಿ ಅಧಿಕಾರಿಗಳು ಸಾಲು ಸಾಲು ಪ್ರಶ್ನೆಗಳನ್ನ ಕೇಳಿದ್ದಾರೆ.