ಅಯೋಧ್ಯೆಯಲ್ಲಿ ಶ್ರೀರಾಮಮಂದಿರ (AYODHYA RAM MANDIR) ಲೋಕಾರ್ಪಣೆಗೆ ಅಂತಿಮ ಹಂತದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಜನವರಿ 22 ರಂದು ಅಯೋಧ್ಯೆ ರಾಮಲಲ್ಲಾ (RAM LALLA) ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಆದರೆ ವಿಶೇಷ ಎಂದರೆ ರಾಮಲಲ್ಲಾ (RAM LALLA) ಮೂರ್ತಿಯ ಕೆಲಸ ನಿರ್ವಹಿಸಿದ್ದಾರೆ ಪುತ್ತೂರಿನ ಯುವ ಕಲಾವಿದ.
ಮೈಸೂರಿನ ಅರುಣ್ ರಾಜ್ (ARUN YOGI RAJ) ತಂಡದಲ್ಲಿದ್ದ ಕಲಾವಿದ ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಸುಮಂತ್ (SUMANTH). ರಾಮಲಲ್ಲಾ ಮೂರ್ತಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಅಯೋಧ್ಯೆಯಲ್ಲಿ (AYODHYA) ಮೂರ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸುಮಂತ್ (SUMANTH) ಊರಿಗೆ ವಾಪಸ್ಸಾಗಿದ್ದಾರೆ. ರಾಮಲಲ್ಲಾ (RAM LALLA) ಮೂರ್ತಿಯನ್ನು ತಯಾರಿಸುವ ಸಂದರ್ಭದ ಅನುಭವವನ್ನು ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ.
ರಾಮಲಲ್ಲಾ ಮೂರ್ತಿಯನ್ನು ಮುಟ್ಟೋದೇ ಜೀವನದ ಭಾಗ್ಯ. ರಾಮಲಲ್ಲಾ (RAM LALLA) ಮೂರ್ತಿಯ ಕಸೂತಿ ಕೆಲಸ ಮತ್ತು ಪಾಲಿಶಿಂಗ್ ಕೆಲಸ ನಿರ್ವಹಿಸಿದ್ದೇನೆ ಎಂದಿದ್ದಾರೆ. ರಾಮಲಲ್ಲಾ ಮೂರ್ತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಅಚ್ಚುಕಟ್ಟಾಗಿ ಕೆತ್ತಲಾಗಿದೆ. ಮೂರ್ತಿ ಸಿದ್ಧಪಡಿಸುವ ಸಮಯ ರಾಮಜನ್ಮಭೂಮಿ ಸೇವಾ ಟ್ರಸ್ಟ್ನ ಮಹಾಂತರು, ಉಡುಪಿ ಪೇಜಾವರ ಸ್ವಾಮಿ ಮೊದಲಾದ ಗಣ್ಯರು ಭೇಟಿ ನೀಡಿ ಮಾರ್ಗದರ್ಶನ ಮಾಡಿದರು.
ಅರುಣ್ ರಾಜ್ (ARUN YOGI RAJ) ಸಿದ್ಧಪಡಿಸಿದ ರಾಮಲಲ್ಲಾ (RAM LALLA) ಮೂರ್ತಿಯೇ ಅಂತಿಮವಾಗುವ ವಿಶ್ವಾಸವಿದೆ. ಅಷ್ಟೊಂದು ಸುಂದರವಾಗಿ ಮೂರ್ತಿ ನಿರ್ಮಾಣವಾಗಿದೆ. ದೇಶದ ಎಲ್ಲಾ ಕಲೆಗಳನ್ನು ಸಂಯೋಜಿಸಿ ಮೂರ್ತಿ ಕೆತ್ತಲಾಗಿದೆ ಎಂದು ಕಲಾವಿದ ಸುಮಂತ್ (SUMANTH) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ಶಿಲ್ಪಕಲಾ ಗುರುಕುಲದ ವಿದ್ಯಾರ್ಥಿಯಾಗಿರುವ ಸುಮಂತ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದವರು.