ಕೆಲವೇ ದಿನಗಳ ಮುಂಚೆ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆಮಾಡಿತ್ತು. ಇದೇ ವೇಳೆ ಸುಮಲತಾ ಮುದ್ದಾದ ಮಗುವನ್ನು ಎತ್ತಿ ಮುದ್ದಾಡುವ ಫೋಟೋ ಕೂಡ ವೈರಲ್ ಆಗಿತ್ತು. ಮತ್ತೆ ರೆಬೆಲ್ ಸ್ಟಾರ್ ಮನೆಗೆ ಆಗಮಿಸಿದ್ದಾರೆ ಎಂದು ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದು ಇದೆ. ಆದ್ರೆ ಈ ಬಗ್ಗೆ ಅವಿವಾ ಬೇಸರ ವ್ಯಕ್ತ ಪಡಿಸಿದ್ದಾರೆ.
ಈ bagge ತಮ್ಮ ಇನ್ಸ್ಟಾಗ್ರಾನ್ ನಲ್ಲಿ ಸ್ಟೋರಿ ಹಂಚಿಕೊಂಡಿರುವ ಅವಿವಾ ಬಿದ್ದಪ್ಪ, ಬೇಸರ ವ್ಯಕ್ತಪಡಿಸಿದ್ದಾರೆ.ನಮ್ಮ ಕುಟುಂಬವು ಅದ್ಭುತವಾದ ಗಂಡು ಮಗುವನ್ನು ಆಶೀರ್ವದಿಸಿದೆ. ಪ್ರತಿಯೊಬ್ಬರ ಶುಭ ಹಾರೈಕೆಗಳಿಗೆ ನಾವು ಕೃತಜ್ಞರಾಗಿರುತ್ತೇವೆ ಮತ್ತು ಕೃತಜ್ಞರಾಗಿರುವಾಗ, ನಮ್ಮ ಶಿಶುವಿನ ಫೋಟೋವನ್ನು ವಿವಿಧ ಸುದ್ದಿ/ಮಾಧ್ಯಮಗಳು ಅನಧಿಕೃತವಾಗಿ ಪ್ರಕಟಿಸಿರುವುದು ನಮಗೆ ಅಪಾರವಾದ ಭಾವನಾತ್ಮಕ ಯಾತನೆಯನ್ನು ಉಂಟುಮಾಡಿದೆ ಎಂದು ನಾವು ಹೇಳಲೇಬೇಕು ಎಂದಿದ್ದಾರೆ.
ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ. ನಮ್ಮ ಮಗುವಿನ ಫೋಟೋಗಳನ್ನು ಪ್ರಕಟಿಸಿದ ಯಾವುದೇ ವ್ಯಕ್ತಿ/ಸಂಸ್ಥೆಯು ಅಂತಹ ಚಿತ್ರಗಳನ್ನು ತಕ್ಷಣವೇ ತೆಗೆದುಹಾಕಲು ವಿನಂತಿಸಲಾಗಿದೆ, ವಿಫಲವಾದರೆ ಸೂಕ್ತ ಕಾನೂನು ಕ್ರಮವನ್ನು ಪ್ರಾರಂಭಿಸಲು ಮುಂದಾಗುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ.