ಕಾಳಿ ಸ್ವಾಮೀ ಮೇಲೆ ಕನ್ನಡಪರ ಸಂಘಟನೆಗಳು ಮಸಿ ಬಳಿಯಬಾರದಿತ್ತು. ಸನ್ಯಾಸಿಗಳ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ ಧಾರವಾಡಲ್ಲಿ ಶ್ರೀರಾಮಸೇನಾ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ಸ್ವಾಮೀಜಿಗಳು ಕನ್ನಡ ವಿರೋಧಿಯಾಗಿ ಮಾತಾಡಿಲ್ಲ. ನಾನು ಅವರೊಂದಿಗೆ ಮಾತಾಡಿದ್ದೇನೆ. ಒಂದು ಸುದ್ದಿ ಪ್ರಕಾರ ಅವರು ಕೆಂಪೇಗೌಡರಿಗೆ ಹಾಗೂ ಕುವೆಂಪು ಅವರಿಗೆ ಬೈದಿದಾರೆ ಎಂದಿದೆ.
ಆದರೆ ಆ ರೀತಿ ಅವರು ಯಾವ ಸಂದರ್ಭದಲ್ಲೂ ಬೈದಿಲ್ಲ. ಅಕಸ್ಮಾತ್ ಆ ರೀತಿ ಏನಾದರೂ ಇದ್ದರೆ ದಾಳಿ ಮಾಡಿದವರು ದಾಖಲೆ ಬಿಡುಗಡೆ ಮಾಡಬೇಕಿತ್ತು ಎಂದು ಹೇಳಿದರು.

ಈ ರೀತಿ ಸನ್ಯಾಸಿಗಳ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಹಲ್ಲೆ ಮಾಡಿದವರು ಕ್ಷಮೆ ಕೇಳಬೇಕು. ನಿಮಗೆ ಏನಾದರೂ ನೋವಾಗಿದ್ದರೆ ಕುಳಿತುಕೊಂಡು ಚರ್ಚೆ ಮಾಡಬಹುದು. ನಿಮಗೆ ಏನಾದರು ತಪ್ಪು ಎನಿಸಿದ್ದರೆ ಕೆಸ್ ಹಾಕಬಹುದಾಗಿತ್ತು.
ಈ ರೀತಿ ಖಾವಿ ಧಾರಿ ಸನ್ಯಾಸಿಗೆ ಮಸಿ ಬಳಿಯುವಂತಾದ್ದು ಅಪರಾಧವಾಗಿದ್ದು, ಈ ವಿಚಾರದಲ್ಲಿ ತಪ್ಪು ಮಾಡಿದ್ದಿರಿ ಎಂದು ತಿಳಿಸಿದ್ದಾರೆ.
ಈ ಪ್ರಕರಣವನ್ನು ಶ್ರೀರಾಮ ಸೇನೆ ಸಂಘಟನೆ ಖಂಡಿಸುತ್ತದೆ. ಕೂಡಲೇ ಹಲ್ಲೆ ಮಾಡಿದವರು ಕ್ಷಮೆ ಕೇಳಬೇಕು. ಯಾರೆಲ್ಲಾ ಇದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇವತ್ತು ಕಾಳಿ ಸ್ವಾಮೀಜಿ ನಾಳೆ ಇನ್ನೊಬ್ಬ ಕಾವಿಧಾರಿ ಮೇಲೆ ಕಿಡಿಗೆಡಿಗಳು ಹಲ್ಲೆ ಮುಂದುವರೆಸುತ್ತಾರೆ. ಇದನ್ನ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಆಗ್ರಹಿಸಿದ್ದಾರೆ.