ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ (Sheik haşema) ಬಾಂಗ್ಲಾದ ಪ್ರತಿಭಟನೆ ದಂಗೆಯಾಗಿ ಮಾರ್ಪಾಡಾದ ನಂತರ ದೇಶ ತೊರೆದು ದೇಶ ಬಿಟ್ಟು ಪಲಾಯನ ಮಾಡಿದ ಮೇಲೆ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ (Minority hindus) ಮೇಲಿನ ಹಿಂಸಾಚಾರ ಹೆಚ್ಚಾಗಿದೆ.
ಇದೀಗ ಮತ್ತೆ ಹಿಂಸಾಚಾರ ಹೆಚ್ಚಾಗಿದ್ದು, ಇಸ್ಕಾನ್ (ISKCON) ನಿಷೇಧಿಸಬೇಕೆಂದು ಸ್ಥಳಿಯ ಮುಸ್ಲಿಂ ವ್ಯಾಪಾರಿ ಉಸ್ಮಾನ್ ಮೊಲ್ಲಾ ಎಂಬಾತ ಅವಹೇಳನಕಾರಿ ಪೋಸ್ಟ್ ಮಾಡಿದ್ದೇ ಈಗ ಹಿಂಸಾಚಾರಕ್ಕೆ ಕಾರಣವಾಗಿದೆ.
ಇಸ್ಕಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದಿರುವ ವ್ಯಾಪಾರಿ ಉಸ್ಮಾನ್ ಮೊಲ್ಲಾ ಫೇಸ್‌ಬುಕ್ ಪೋಸ್ಟ್ (Facebook post) ದೇಶದಾದ್ಯಂತ ಗದ್ದಲ ಎಬ್ಬಿಸಿದೆ. ಹೀಗಾಗಿ ಇನ್ನು ಇಸ್ಕಾನ್ ವಕ್ತಾರ ರಾಧಾರಾಮನ್ ದಾಸ್ ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗಾಗಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ಕೋರಿದ್ದಾರೆ.