ಚಿಕ್ಕಮಗಳೂರು: ಯುವಕರ ಗುಂಪೊಂದು ಏಕಾಏಕಿ ಬಂದು ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ತಾಲೂಕಿನ ಉಜೈನಿ ಮತಗಟ್ಟೆ ಹತ್ತಿರ ಕೇಳಿ ಬಂದಿದೆ.
ಮತಗಟ್ಟೆಗಳ ವೀಕ್ಷಕನಾಗಿ ತೆರಳಿದ್ದ ಹಿಂದೂ ಕಾರ್ಯಕರ್ತ ಪ್ರವೀಣ ಖಾಂಡ್ಯ(Praveen Khandya) ಮೇಲೆ ಏಕಾಏಕಿ ಗುಂಪೊಂದು ಹಲ್ಲೆ ಮಾಡಿದೆ ಎನ್ನಲಾಗಿದೆ.
ಘಟನೆಯಲ್ಲಿ ಪ್ರವೀಣ್ ಖಾಂಡ್ಯಗೆ ತಲೆ ಮತ್ತು ಕೈಗೆ ಗಂಭೀರ ಗಾಯವಾಗಿದ್ದು, ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರವೀಣ್ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಎದುರು ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ.