ಬೆಂಗಳೂರಿನಲ್ಲಿ (Bangalore) ಮತ್ತೆ ಎಟಿಎಂ (ATM) ಕಳ್ಳರ ಗ್ಯಾಂಗ್ ಹಾವಳಿ ಹೆಚ್ಚಾಗಿದೆ. ಎಟಿಎಂ ಕಳ್ಳರ ಗ್ಯಾಂಗ್ ನಿಂದಾಗಿ ತಲೆಕೆಡಿಸಿಕೊಂಡಿರೋ ಪೊಲೀಸರು,ಹರಿಯಾಣ (Hariyana) ಮೂಲದ ಎರಡು ಗ್ಯಾಂಗ್ ನ ಹಿಂದೆ ಬಿದ್ದಿದ್ದಾರೆ. ಇತ್ತೀಚೆಗೆ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಎಕ್ಸಿಸ್ ಬ್ಯಾಂಕ್ ಎಟಿಎಂ (Axis bank atm) ಕಳ್ಳತನ ನಡೆದಿದ್ದು, ಇಕೋ ಎರಿಟಿಗ ಕಾರ್ ನಲ್ಲಿ ಬಂದು ಕಳವು ಮಾಡಿರುವ ವಿವರಗಳು ಪೊಲೀಸರಿಗೆ ಲಭ್ಯವಾಗಿದೆ.
ಈ ಖತರ್ನಾಕ್ ಆರೋಪಿಗಳು ಹೊದಿಕೆಯನ್ನು ಮೈಮೇಲೆ ಹಾಕಿಕೊಂಡು ಎಟಿಎಂ (ATM) ಒಳಗೆ ನುಗ್ಗಿ ಕೃತ್ಯ ಎಸಗುವುದರಿಂದ, ಈ ಖದೀಮರನ್ನ ಪತ್ತೆಹಚ್ಚೋದು ಪೊಲೀಸರಿಗೆ (Police) ಸವಾಲಾಗಿದೆ.ಗುರುತು ಕಾಣಿಸದಂತೆ ಕಳವು ಮಾಡುತ್ತಿರೋ ಆರೋಪಿಗಳು, ಕಳ್ಳತನ ವೇಳೆ ಎಟಿಎಂ ನಲ್ಲಿರುವ ಸಿಸಿಟಿವಿ ಕ್ಯಾಮೆರಾ (cc camera lense) ಲೆನ್ಸ್ ಗೆ ಕಪ್ಪು ಬಣ್ಣ ಬಳಿದು,ಬಳಿಕ ಗ್ಯಾಸ್ ಕಟರ್ (Gas cutter) ಬಳಸಿ ಎಟಿಎಂ ಓಪನ್ ಮಾಡಿ ಲಕ್ಷಾಂತರ ಹಣ ಕಳವು ಮಾಡಿ ಎಸ್ಕೇಪ್ ಆಗ್ತಾರೆ.
ಜುಲೈ 6 ರಂದು ಬೆಳಗಿನ ಜಾವ 3.30 ಕ್ಕೆ ಈ ಕೃತ್ಯ ನಡೆದಿದ್ದೂ,ಸದ್ಯ ಸಿಸಿಟಿವಿಯಲ್ಲಿ ಆರೋಪಿಗಳ ಕೃತ್ಯ ಸೆರೆಯಾಗಿದೆ. ಈ ಸಂಬಂಧ ಏಜೆನ್ಸಿ ಸಿಬ್ಬಂದಿ ಕಿರಣ್ ಎಂಬುವವರು ದೂರು ದಾಖಲಿಸಿದ್ದಾರೆ.ಬೆಳ್ಳಂದೂರು ಠಾಣೆಗೆ ದೂರು ಎಫ್ ಐಆರ್ (FIR) ದಾಖಲಲಾಗಿದೆ. ಸದ್ಯ ಆರೋಪಿಗಳ ಪತ್ತೆಗೆ ಬಲೆ ಬಿಸಿರೋ ಪೊಲೀಸರು, ಪ್ರತಿನಿತ್ಯ ರಾತ್ರಿ ವೇಳೆ ನಗರದ ಎಟಿಎಂಗಳ ಸುತ್ತಮುತ್ತಲು ಹೆಚ್ಚಾಗಿ ಗಸ್ತಿಗೆ ಸೂಚನೆ ನೀಡಿದ್ದಾರೆ.