ಶಾಂತವಾಗಿದ್ದ ಭಾರತವನ್ನು (India) ಭಯೋತ್ಪಾದನೆಯ (Terrorism) ಮೂಲಕ ಕೆಣಕಿರುವ ಪಾಕಿಸ್ತಾನ (Pakistan) ಈಗ ವಿಲ ವಿಲ ಅಂತ ಒದ್ದಾಡುತ್ತಿದ್ದೆ. ಭಾರತ ಯಾವ ಕ್ಷಣದಲ್ಲಿ ಇಲ್ಲಿಂದ ಆಕ್ರಮಣ ಮಾಡಿಬಿಡುತ್ತೋ ಅಂತ ನಡುಗುತ್ತಿದೆ. ಹೀಗಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ (Aseem munir) ತನ್ನ ಕುಟುಂಬವನ್ನು ವಿದೇಶಕ್ಕೆ ಕಳುಹಿಸಿದ್ದಾನೆ.

ಹೌದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಹಾಗೂ ಇನ್ನುಳಿದ ಕೆಲ ಮುಖ್ಯ ಅಧಿಕಾರಿಗಳ ಕುಟುಂಬ ಬ್ರಿಟನ್ ಹಾಗೂ ನ್ಯೂಜೆರ್ಸಿಗೆ ಪ್ರಯಾಣ ಬೆಳೆಸಿದೆ. ಖಾಸಗಿ ಏರ್ ಕ್ರಾಫ್ಟ್ ಗಳಲ್ಲಿ ಬ್ರಿಟನ್ ಗೆ ಕೆಲವರು ದೌಡಾಯಿಸಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ, ಟಾಪ್ ಜನರಲ್, ಕಮ್ಯಾಂಡರ್ ಗಳಿಂದ ತಮ್ಮ ಕುಟುಂಬಗಳ ಬ್ರಿಟನ್ ಗೆ ರವಾನೆ ಮಾಡಲಾಗಿದೆ.ಭಾರತದ ದಾಳಿಯಿಂದ ತಮ್ಮ ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು ಭಯದಿಂದ ಈ ರೀತಿ ವಿದೇಶಕ್ಕೆ ರವಾನೆ ಮಾಡಲಾಗಿದೆ.

ಇನ್ನು ಶಾಹೀರ್ ಶಾಂಶದ್ ಮಿರ್ಜಾರಿಂದ ಕುಟುಂಬದ ಸದಸ್ಯರೂ ಕೂಡ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಅಧಿಕಾರಿಗಳ ಕುಟುಂಬಗಳು ಸೇಫ್ ಆಗಲು ಹೀಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದೆ.