ಈಗಿನ ದರಕ್ಕೆ 2014ರಲ್ಲಿ ಎರಡು ಗ್ಯಾಸ್ ಸಿಲಿಂಡರ್ಗಳು ಬರುತ್ತಿದ್ದವು ಎಂದು ರಾಹುಲ್ ಗಾಂಧಿ ಅವರು ಭಾನುವಾರ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಗೃಹ ಬಳಕೆ ಅಡುಗೆ ಅನಿಲ ಬೆಲೆ ಮತ್ತೆ ಹೆಚ್ಚಳವಾಗಿದೆ. 14.2 ಕೆಜಿ ತೂಕದ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದ್ದು ನೂತನ ದರ ಇಂದು ಶನಿವಾರ ಮೇ 7ರಿಂದಲೇ ಜಾರಿಗೆ ಬಂದಿದೆ. ಈಗ ಅಡುಗೆ ಅನಿಲ ಬೆಲೆ 999 ರೂಪಾಯಿ 50 ಪೈಸೆಯಾಗಿದೆ.
ಅಡುಗೆ ಅನಿಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು, 2014ಕ್ಕೂ ಹಿಂದಿನ ಬೆಲೆ ಮತ್ತು ಈಗಿನ ಬೆಲೆಯನ್ನು ತುಲನೆ ಮಾಡಿ ಟ್ವೀ ಟ್ ಮಾಡಿದ್ದಾರೆ.
‘LPG ಸಿಲಿಂಡರ್ 2014ರಲ್ಲಿ ₹410 ಇತ್ತು. ₹827 ಸಬ್ಸಿಡಿ ದೊರೆಯುತ್ತಿತ್ತು. ಈಗ LPG ₹999 (ದೆಹಲಿ ದರ) ದಾಟಿದೆ. ಶೂನ್ಯ ಸಬ್ಸಿಡಿ ಇದೆ. ಭಾರತೀಯ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಆಡಳಿತವೇ ಸೂಕ್ತ. ಇದು ನಮ್ಮ ಆರ್ಥಿಕ ನೀತಿಯೂ ಆಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ವಾರ, 19-ಕೆಜಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು 102 ರೂಪಾಯಿ 50 ಪೈಸೆಯಷ್ಟು ಹೆಚ್ಚಿಸಲಾಗಿತ್ತು. ಇದು ಸತತ ಮೂರನೇ ಮಾಸಿಕ ಹೆಚ್ಚಳವಾಗಿದೆ.ಮಾರ್ಚ್ನಲ್ಲಿ ಗೃಹಬಳಕೆಯ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ಗೆ 50 ರೂಪಾಯಿ ಹೆಚ್ಚಳವಾಗಿತ್ತು.