ಅತ್ಯಾಧುನಿಕ ಶೈಲಿಯ ರೆಸ್ಟಾರೆಂಟ್ಗಳಿಗೆ ಜಗತ್ತಿನಲ್ಲಿ ಯಾವುದೇ ಕೊರತೆಯಿಲ್ಲ. ಗಗನಚುಂಬಿ ರೆಸ್ಟಾರೆಂಟ್ಗಳು, ಅಂಡರ್ವಾಟರ್ ಕೆಫೆಗಳು ಹೀಗೆ ಹೊಸತನವನ್ನು ಅಳವಡಿಸಿಕೊಂಡಿರುವ ಅನೇಕ ರೆಸ್ಟಾರೆಂಟ್ಗಳು ಕಾಣಸಿಗುತ್ತದೆ. ಆದರೆ ಎಂದಾದರೂ ಮೃತದೇಹದ ಜೊತೆ ಕೂತು ಖಾದ್ಯ ಸವಿಯುವ ಬಗ್ಗೆ ಯೋಚಿಸಿದ್ದೀರಾ..?
ಹೌದು..! ನೀವು ಓದಿದ್ದು ಸರಿಯಾಗಿಯೇ ಇದೆ. ಅಹಮದಾಬಾದ್ನಲ್ಲಿ ಲಕ್ಕಿ ರೆಸ್ಟಾರೆಂಟ್ನ್ನು ಸ್ಮಶಾನದ ಮೇಲೆ ನಿರ್ಮಿಸಲಾಗಿದೆ. ನೀವು ಬದುಕಿರುವವರನ್ನು ಗೌರವಿಸುವಂತೆ ಸತ್ತವರನ್ನೂ ಗೌರವಿಸಿ ಎಂಬ ಘೋಷವಾಕ್ಯದೊಂದಿಗೆ ಈ ರೆಸ್ಟಾರೆಂಟ್ ನಿರ್ಮಿಸಲಾಗಿದೆ.
ರೆಸ್ಟಾರೆಂಟ್ನ ಮಾಲೀಕ ಕೃಷ್ಣನ್ ಕುಟ್ಟಿ ಅಹಮದಾಬಾದ್ನಲ್ಲಿ ಇದೊಂದು ಸ್ಮಶಾನ ಎಂದು ತಿಳಿಯದೇ ಈ ಫ್ಲಾಟ್ ಖರೀದಿ ಮಾಡಿದ್ದರಂತೆ. ಆದರೆ ರೆಸ್ಟಾರೆಂಟ್ ನಿರ್ಮಿಸಬೇಕು ಎಂಬ ಇವರ ಕನಸಿಗೆ ಸ್ಮಶಾನ ಅಡ್ಡಿ ಬರಲಿಲ್ಲ. ಸಮಾಧಿಗಳನ್ನು ಅಸ್ಪ್ರಶ್ಯವಾಗಿ ಕಾಣುವಂತೆಯೇ ಇಟ್ಟು ಅವುಗಳ ಸುತ್ತ ಕಬ್ಬಿಣದ ಸರಳುಗಳನ್ನು ನಿರ್ಮಿಸಲಾಯ್ತು. ಸಮಾಧಿಗಳ ಸುತ್ತಲೂ ಕುಳಿತು ಖಾದ್ಯ ಸೇವಿಸಲು ಆಸೀನ ಸಿದ್ಧಪಡಿಸಲಾಯ್ತು. ಈ ಮೂಲಕ ಈ ವಿಶಿಷ್ಠ ಸಮಾಧಿ ರೆಸ್ಟಾರೆಂಟ್ ನಿಮಾರ್ಣವಾಯ್ತು. ಅಂದಹಾಗೆ ಇದು ಬರೋಬ್ಬರಿ 72 ವರ್ಷಗಳ ಹಿಂದಿನ ರೆಸ್ಟಾರೆಂಟ್ ಆಗಿದೆ.