ವಿಧಾನಸಭೆ ಅಧಿವೇಶನದಲ್ಲಿ ಮುಡಾ (MUDA) ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ ಅಂತ ಬಿಜೆಪಿ ಜೆಡಿಎಸ್ (Bjp – Jds) ನಾಯಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ರು. ವಿಧಾನಸಭೆ ಪೂರ್ವ ಮೊಗಸಾಲೆಯಲ್ಲಿ ವಿಪಕ್ಷನಾಯಕ ಆರ್. ಅಶೋಕ್ (R ashok) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಮಾಡಿದ್ರು.
ಧರಣಿಯಲ್ಲಿ ಸಿ.ಟಿ ರವಿ, ಸುನೀಲ್ ಕುಮಾರ್, ಎನ್ ರವಿಕುಮಾರ್, ಶರವಣ, ಸುರೇಶ್ ಗೌಡ, ಸುರೇಶ್ ಕುಮಾರ್, ಶಾಂತಾರಾಮ್ ಸಿದ್ದಿ, ಆರಗ ಜ್ಞಾನೇಂದ್ರ ಸೇರಿದಂತೆ ದೋಸ್ತಿ ನಾಯಕರು ಭಾಗಿಯಾಗಿದ್ರು. ಇತ್ತ 187 ಕೋಟಿ ಗೋವಿಂದ, ಸಾವಿರಾರು ಸೈಟು ಮೈಸೂರಲ್ಲಿ ಗೋವಿಂದ ಅಂತ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಭಜನೆ ಮಾಡಿದ್ದು ಗಮನ ಸೆಳೆಯಿತು.
ಇನ್ನು ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಿದ್ದರಾಮಯ್ಯ (Siddaramaiah) ಕುಟುಂಬದ ಸದಸ್ಯರಿಗೆ ಸೈಟು ಹೋಗಿದೆ. ಮೂಡಾ ಹಗರಣದಲ್ಲಿ ಸಾವಿರಾರು ಕೋಟಿ ಅಕ್ರಮ ಆಗಿದೆ. ಸಿಎಂ (Cm) ಎದ್ದು ವಿರೋಧ ಪಕ್ಷಗಳಿಗೆ ಸವಾಲು ಹಾಕ್ತಾರೆ ಅಂದುಕೊಂಡಿದ್ವಿ. ಆದ್ರೆ ಈ ರೀತಿ ಪಲಾಯಾನವಾದಿ ಆಗ್ತಾರೆ ಅಂದುಕೊಂಡಿರಲಿಲ್ಲ. ಸರ್ಕಾರದ ಪಾಪದ ಕೊಡ ತುಂಬಿದೆ. ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂತ ಆಗ್ರಹಿಸಿದ್ರು.