ಹೆಚ್ಚು ಜನ ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ.. ತಮ್ಮ ಚರ್ಮ ಯಾವುದೆ ಕಲೆಗಳಿಲ್ಲದೆ ಹೋಳಪಾಗಿ ಅಂದವಾಗಿ ಕಾಣಿಸಬೇಕು ಅಂತ ಬಯಸುತ್ತಾರೆ..ಆದರೇ ಕೆಲವರಿಗೆ ಮಂಡಿ ಹಾಗೂ ಮೊಣಕೈ ಭಾಗ ತುಂಬಾನೆ ಕಪ್ಪಿರುತ್ತದೆ.. ಕೆಲವರು ಅದರ ಬಗ್ಗೆ ಕಲೆ ಕೆಡಿಸಿಕೊಳ್ಳುವುದಿಲ್ಲಾ.. ಆದರೇ ಇನ್ನು ಹಲವರು ಸಾಕಷ್ಟು ಮದ್ದುಗಳನ್ನ ಮಾಡ್ತಾರೆ, ಕ್ರೀಮ್ಗಳನ್ನ ಬಳಸಿದ್ರು ಕಡಿಮೆಯಾಗಿರುವುದಿಲ್ಲಾ.ಈ ದುಬಾರಿ ಖರ್ಚು ಮಾಡುವ ಬದಲು ಈ ಮನೆ ಮದ್ದನ್ನು ಟ್ರೈ ಮಾಡಿ..
![](https://pratidhvani.com/wp-content/uploads/2024/06/IMG_8112.jpeg)
ಕೊಬ್ಬರಿ ಎಣ್ಣೆ..
ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.. ಹಾಗೂ ಹೈಡ್ರೇಟ್ ಆಗಿರಲು ಸಹಾಯಕಾರಿ..ಇನ್ನೂ ಕೊಬ್ಬರಿಯಣ್ಣೆಯಲ್ಲಿ ವಿಟಮಿನ್ ಈ ಅಂಶ ಹೆಚ್ಚಿರುವುದರಿಂದ ನಿಮ್ಮ ಕಪ್ಪು ಚರ್ಮವನ್ನು ಬಿಳುಪಾಗಿಸುತ್ತದೆ..ಅರ್ಧ ಟೇಬಲ್ ಸ್ಪೂನ್ ಅಷ್ಟು ಕೊಬ್ಬರಿ ಎಣ್ಣೆಗೆ ಚಿಟಿಕಿ ನಿಂಬೆ ರಸವನ್ನು ಬರೆಸಿ ಕಪ್ಪಾದ ಜಾಗದಲ್ಲಿ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ ಮಂಡಿಯಾ ಭಾಗದಲ್ಲಿರುವ ಕಪ್ಪು ಕಡಿಮೆಯಾಗುತ್ತದೆ..
![](https://pratidhvani.com/wp-content/uploads/2024/06/IMG_8114-1.jpeg)
ಟೂತ್ ಪೇಸ್ಟ್
ಟೂತ್ ಪೇಸ್ಟ್ ಕಪ್ಪು ಕಲೆಗಳನ್ನು ಅಥವ ಸೂರ್ಯನ ಕಿರಣದಿಂದಾಗುವ ಟ್ಯಾನ್ಗಳನ್ನು ಹೋಗಲಾಡಿಸುವುದಕ್ಕೆ ಉತ್ತಮ ಮದ್ದು..ಮೊದಲಿಗೆ ಒಂದು ನಿಂಬೆ ಹಣ್ಣನ್ನು ಅರ್ಧ ಭಾಗ ಮಾಡಿ.. ನಂತ್ರ ಮಂಡಿ ಹಾಗೂ ಮೋಣಕೈ ಗೆ ಹಚ್ಚಿ ಚನ್ನಾಗಿ ಸ್ಕ್ರಬ್ ಮಾಡಿ ಸ್ವಲ್ಪ ಹೊತ್ತು ಹಾಗೆ ಬಿಡಿ..ನಂತ್ರ ಅದರ ಮೇಲೆ ಟೂತ್ ಪೇಸ್ಟ್ನ ಹಚ್ಚಿ ಕೆಲ ನಿಮಷಗಳ ಕಾಲ ಹಾಗೆ ಬಿಟ್ಟು ನೀರಿನಿಂದ ತೊಳೆಯುವುದರಿಂದ ಕಪ್ಪು ಬೇಗನೆ ನಿವಾರಣೆಯಾಗುತ್ತದೆ..
![](https://pratidhvani.com/wp-content/uploads/2024/06/IMG_8115.jpeg)
ಮೊಸರು ಮತ್ತು ಕಾಫಿ ಪುಡಿ
ಮೊಸರು ನಮ್ಮ ತ್ವಜೆಯನ್ನು ನ್ಯಾಚುರಲರ್ ಆಗಿ ಬ್ಲೀಚ್ ಮಾಡುವುದಕ್ಕೆ ಸಹಯಾಕಾರಿ.ಹಾಗೂ ಮೊಸರಿನಲ್ಲಿರುವ ph ಲೆವೆಲ್ ಸ್ಕಿನ್ ಇನ್ಫೆಕ್ಷನ್ ನ ದೂರಾ ಮಾಡಿ ಕ್ಲೆನ್ಸ್ ಮಾಡುತ್ತದೆ.. ಒಂದೆರಡು ಟೀ ಸ್ಪೂನ್ನಷ್ಟು ಮೊಸರಿಗೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಕಾಫಿಪುಡಿ ಬೆರೆಸಿ ಚನ್ನಾಗಿ ಮಿಶ್ರಣ ಮಾಡಿ..ಆ ಪೇಸ್ಟ್ನ ಕಪ್ಪಾಗಿರುವ ಜಾಗದಲ್ಲಿ ಅಪ್ಲೆ ಮಾಡಿ ಸ್ಕ್ರಬ್ ಮಾಡುವುದರಿಂದ ಉತ್ತಮ ತ್ವಜೆಯನ್ನು ನಿಮ್ಮದಾಗಿಸಿಕೊಳ್ಳ ಬಹುದು.
![](https://pratidhvani.com/wp-content/uploads/2024/06/IMG_8116.jpeg)