ಗುಜರಾತ್ : ಗುಜರಾತ್ನಲ್ಲಿ ಬಿಪರ್ಜಾಯ್ ಚಂಡಮಾರುತದ ಅಬ್ಬರಕ್ಕೆ ಗುರುವಾರ ಸಂಜೆ ವೇಳೆ ಕನಿಷ್ಟ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಎನ್ಡಿಆರ್ಎಫ್ ಅಧಿಕೃತ ಮಾಹಿತಿ ನೀಡಿದೆ. ಕುರುಬ ಹಾಗೂ ಅವರ ಪುತ್ರ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು ಈ ಮೂಲಕ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ರಾಮ್ ಪರ್ಮಾರ್ (55) ಹಾಗೂ ರಾಜೇಶ್ (22) ಸೋದ್ವಾದರ್ ಗ್ರಾಮದಲ್ಲಿ ಕೊಚ್ಚಿಕೊಂಡು ಹೋಗ್ತಿದ್ದ ಕುರಿಗಳ ಹಿಂಡನ್ನು ರಕ್ಷಿಸುತ್ತಿದ್ದ ಸಂದರ್ಭದಲ್ಲಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಚಂಡಮಾರುತದ ಪ್ರಭಾವದಿಂದಾಗಿ ಈವರೆಗೆ 22 ಮಂದಿ ಗಾಯಗೊಂಡಿದ್ದಾರೆ.
ಗುರುವಾರ ಸಂಜೆ 6:30ರ ಸುಮಾರಿಗೆ ಜಖೌ ಬಂದರಿನ ಬಳಿ ಚಂಡಮಾರುತವು ಭಾರತದ ಭೂ ಪ್ರದೇಶವನ್ನು ಪ್ರವೇಶಿಸಿದೆ.ಗುರುವಾರ ಸಂಜೆ ಪಶ್ಚಿಮ ಕರಾವಳಿಯಾದ್ಯಂತ ವ್ಯಾಪಕ ಮಳೆ , ಬಿರುಗಾಳಿ ಸಂಭವಿಸಿದೆ.