ಚುನಾವಣಾ ಆಯೋಗವು (EC) ಭಾನುವಾರದಂದು ನಡೆಯುತ್ತಿರುವ ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆಗಳಿಗಾಗಿ ಸಾರ್ವಜನಿಕ ಸಭೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಗೊಳಿಸಿದೆ, ಇದು ಒಳಾಂಗಣ ಸಾರ್ವಜನಿಕ ಸಭೆಯು ಶೇ 50ರಷ್ಟು ಮಾತ್ರ ಸಾಮರ್ಥ್ಯ ಇರಬೇಕು, ತೆರೆದ ಮೈದಾನದ ಸಭೆಯು ಶೇ 30% ರಷ್ಟು ಜನ ಮಾತ್ರ ಸೇರಲು ಅನುಮತಿಸುತ್ತದೆ ಎಂದು ಹೇಳಿದೆ.
ಶನಿವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರೊಂದಿಗಿನ ಚುನಾವಣೆಗೆ ಒಳಪಡುವ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಸಿದ್ದು ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. COVID-19 ಪರಿಸ್ಥಿತಿಯಲ್ಲಿ “ಗಮನಾರ್ಹ ಸುಧಾರಣೆ” ಕಂಡುಬಂದಿದೆ ಮತ್ತು ಪಾಸಿಟಿವ್ ಪ್ರಕರಣಗಳು ಮತ್ತು ಆಸ್ಪತ್ರೆಗೆ ದಾಖಲೆಯಲ್ಲಿ “ಗಣನೀಯ ಇಳಿಕೆ” ಕಂಡುಬಂದಿದೆ ಎಂದು ಆರೋಗ್ಯ ಮುಖ್ಯ ಕಾರ್ಯದರ್ಶಿಗಳು ಇಸಿಗೆ ತಿಳಿಸಿದ್ದರು.
ಮುಖ್ಯ ಕಾರ್ಯದರ್ಶಿಗಳು ಮತ್ತು ಚುನಾವಣೆಗೆ ನೇಮಕಗೊಂಡ ವಿಶೇಷ ವೀಕ್ಷಕರು ನಿರ್ಬಂಧಗಳನ್ನು ಸಡಿಲಿಸಲು ಶಿಫಾರಸು ಮಾಡಿದ್ದಾರೆ ಎಂದು EC ಹೇಳಿದೆ. ದೇಶದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಮತ್ತು ಗರಿಷ್ಠ ಪ್ರಕರಣಗಳು ಚುನಾವಣೆಗೆ ಇಲ್ಲದ ರಾಜ್ಯಗಳಿಂದ ವರದಿಯಾಗುತ್ತಿವೆ ಎಂದು ಆರೋಗ್ಯ ಕಾರ್ಯದರ್ಶಿ ಆಯೋಗಕ್ಕೆ ತಿಳಿಸಿದರು.
“ದೇಶದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಮತದಾನಕ್ಕೆ ಹೋಗುವ ರಾಜ್ಯಗಳು ಬಹಳ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕಂಡುಬಂರುತ್ತಿದೆ. ಜನವರಿ 21/22 ರಂದು ಕೋವಿಡ್‌ನ ಉತ್ತುಂಗವನ್ನು ತಲುಪಿತ್ತು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಆಯೋಗಕ್ಕೆ ವಿವರಿಸಿದರು, ನಂತರ ಭಾರತದಲ್ಲಿ ಸುಮಾರು 2.93 ಲಕ್ಷ ಪ್ರಕರಣದಿಂದ 1.72 ಲಕ್ಷಕ್ಕೆ ಕಡಿಮೆಯಾಗುತ್ತಿವೆ, ”ಎಂದು ಅಖಿಲ ಭಾರತ ಕೋವಿಡ್ ಪ್ರಕರಣಗಳ ಅಂಕಿಅಂಶಗಳು ಹೇಳುತ್ತಿವೆ ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ – ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ – ಒಟ್ಟು ಪ್ರಕರಣಗಳ ಸಂಖ್ಯೆ ಜನವರಿ 22 ರಂದು ಗರಿಷ್ಠ 32,000 ರಿಂದ ಫೆಬ್ರವರಿ 6 ಅಂದರೆ ಶನಿವಾರ 7,000 ಕ್ಕೆ ಇಳಿದಿದೆ ಎಂದು EC ತಿಳಿಸಿದೆ. ಲಸಿಕೆ ಹಾಕಿರುವ ಪ್ರಮಾಣ ತೃಪ್ತಿಕರವಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಆಯೋಗಕ್ಕೆ ತಿಳಿಸಿದರು.
“COVID ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಶಾಲೆಗಳು/ಕಾಲೇಜುಗಳು ಮತ್ತು ಇತರ ಸಂಸ್ಥೆಗಳನ್ನು ತೆರೆಯುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಆಯೋಗವು ಗಮನಿಸಿದೆ” ಎಂದು EC ಹೇಳಿದೆ.
ಹಿಂದಿನ 1,000 ಜನರ ಮಿತಿಯಿಂದ ಸಾರ್ವಜನಿಕ ಸಭೆಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದರೂ, ರೋಡ್-ಶೋಗಳು ಮತ್ತು ಮೆರವಣಿಗೆಗಳ ಮೇಲಿನ ನಿಷೇಧವು ಮುಂದುವರಿಯುತ್ತದೆ. ಮನೆ-ಮನೆ ಪ್ರಚಾರಕ್ಕಾಗಿ 20 ಜನರ ಮಿತಿಯೂ ಮುಂದುವರಿಯುತ್ತದೆ. ಒಂದು ವೇಳೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕ ಸಭೆಗಳಿಗೆ ಹಾಜರಾಗಲು ಕಡಿಮೆ ಮಿತಿಗಳನ್ನು ನಿಗದಿಪಡಿಸಿದರೆ, SDMA ಯ ಮಾರ್ಗಸೂಚಿಗಳು ಚಾಲ್ತಿಯಲ್ಲಿರುತ್ತವೆ ಎಂದು EC ಹೇಳಿದೆ. ಜನವರಿ 8 ರಂದು ಚುನಾವಣೆ ಘೋಷಣೆಯಾದಾಗ ಸ್ಥಾಪಿಸಲಾದ ಎಲ್ಲಾ ಇತರ ನಿಯಮಗಳು ಮುಂದುವರಿಯುತ್ತವೆ ಎಂದು EC ಹೇಳಿದೆ.












