ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ವಿರುದ್ದ ಪೊಲೀಸರು ಎರಡನೇ ಪ್ರಕರಣ ದಾಖಲಿಸಿದ್ದಾರೆ. ಅಸ್ಸಾಂನ ಗುವಾಹಟಿ ವಿಮಾಣ ನಿಲ್ದಾಣದಿಂದ ಕೊಕ್ರಜಾರ್ಗೆ ಕರೆತರುವ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಸ್ಸಾಂನ ಬಾರ್ಪೆಟಾಗೆ ಕರೆದುಕೊಂಡು ಹೋಗುವ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಸೀಟಿನ ಮೇಲೆ ಅಧಿಕಾರಿಯನ್ನು ತಳ್ಳುವ ಮೂಲಕ ಅಸಭ್ಯ ಸನ್ನೆಗಳನ್ನು ಮಾಡುವ ಮೂಲಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಿವಾದಾತ್ಮಕ ಟ್ವೀಟ್ ಮಾಡಿದ ಆರೋಪದ ಮೇಲೆ ಜಿಗ್ನೇಶ್ ಮೇವಾನಿಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ನಿನ್ನೆ ಜಾಮೀನು ಪಡೆದ ಮರುಕ್ಷಣವೇ ಪೊಲೀಸರು ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಪುನಃ ಜಿಗ್ನೇಶ್ನನ್ನು ಬಂಧಿಸಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಜಿಗ್ನೇಶ್ ಇದು ಬಿಜೆಪಿ ಹಾಗೂ ಸಂಘಪರಿವಾರದ ಸಂಚು ನನ್ನ ಹೆಸರು ಹಾಳು ಮಾಡಲು ಈ ರೀತಿಯ ಸೇಡಿನ ರಾಜಕೀಯವನ್ನು ಮಾಡಲಾಗುತ್ತಿದೆ. ಮೊದಲು ರೋಹಿತ್ ವೇಮುಲಾ, ಚಂದ್ರಶೇಖರ್ ಅಜಾದ್ಗೆ ಈ ರೀತಿ ಮಾಡಿದ್ದರು. ಇದೀಗ ನನ್ನ ವಿರುದ್ದ ಇದೇ ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದು ಜಿಗ್ನೇಶ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಗ್ನೇಶ್ ವಕೀಲ ಅಂಗಶುಮಾನ್ ಬೋರಾ ಈ ರೀತಿಯ ಆರೋಪಗಳು ನಮ್ಮಗೆ ಆಶ್ಚರ್ಯ ಉಂಟು ಮಾಡಿದೆ. ಮೂರು ದಿನಗಳ ಕಾಲ ಠಾಣೆಯಲ್ಲಿರುವ ಸಮಯದಲ್ಲಿ ಹಲ್ಲೆ ನಡೆಸಿರುವ ಯಾವುದೇ ಒಂದು ಸುದ್ದಿಯಿರಲಿಲ್ಲ. ಆದರೆ, ನಿನ್ನೆ ಜಾಮೀನು ಪಡೆದ ಮರುಕ್ಷಣವೇ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ ಪುನಃ ಜಾನೀನು ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಜಿಗ್ನೇಶ್ ಪರ ವಕೀಲ ತಿಳಿಸಿದ್ದಾರೆ.