ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ (Sheshadripuram Police station) ಬಳಿ ವಿಕಲಚೇತನ ಯುವಕನೋರ್ವ ತನ್ನ ಹೆಂಡತಿಯ ಹೆರಿಗೆಗಾಗಿ ಸಹಾಯ ಮಾಡಿ ಎಂದು ಕೈಯಲ್ಲಿ ಕೋರಿಕೊಳ್ಳುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಕುರಿತು ಚಿರಂಜೀವಿ ಕುಲಕರ್ಣಿ (Chiranjeevi kulkarni) ಎಂಬುವವರು ಯುವಕನ ಭಾವಚಿತ್ರದೊಂದಿಗೆ ಟ್ವೀಟ್ ಮಾಡಿದ್ದು, “ರಾತ್ರಿ 11.45ರ ಸಮಯ, ಶೇಷಾದ್ರಿಪುರಂ ಪೊಲೀಸ್ ಠಾಣೆ ಬಳಿ ಐಜಾಜ್ ಅಹಮದ್ (Aijaz Ahmed) ಬೀದಿ ದೀಪದ ಕೆಳಗೆ ನಿಂತಿರುವುದನ್ನು ನಾನು ನೋಡಿದೆ. ವೃತ್ತಿಯಲ್ಲಿ ಟೈಲರ್ ಆಗಿರುವ ಇವರು ದೆಹಲಿಯಿಂದ (Delhi) ಬಂದು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಂಡತಿ ಗರ್ಭಿಣಿಯಾಗಿದ್ದು, (wife pregnant) ಕೆಲವು ಸಮಸ್ಯೆ ಕಾಣಿಸಿಕೊಂಡಿದೆ ಎಂದು ಅವರು ಹಿಂದಿಯಲ್ಲಿ ಹೇಳಿದರು. ಅವರಿಗೆ ಸಹಾಯ ಬೇಕಾಗಿದೆ. ಅವರು ಫೋನ್‌ಪೇ (phonepe) ಹೊಂದಿದ್ದು, (9719127111) ಸಹಾಯ ನೀಡುವವರು ಈ ನಂಬರ್ ಗೆ ಸಂಪರ್ಕಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.