ಗಾಯಗೊಂಡಿರುವ ಮಧ್ಯಮ ವೇಗಿ ಶಾಹಿನ್ ಅಫ್ರಿದಿ ಬದಲು ಯುವ ಬೌಲರ್ ಮೊಹಮದ್ ಹಸ್ನೇನ್ ಪಾಕಿಸ್ತಾನದ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಶಾಹಿನ್ ಅಫ್ರಿದಿ ತಂಡದಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಓವಲ್ ಇನ್ವಿಸಿಬಲ್ ತಂಡದ ಪರ ಆಡುತ್ತಿರುವ ಮೊಹಮದ್ ಹಸ್ನೇನ್ ಅವರನ್ನು ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಇಂಗ್ಲೆಂಡ್ ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

22 ವರ್ಷದ ಹಸ್ನೇನ್ 18 ಟಿ-20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದು, 17 ವಿಕೆಟ್ ಪಡೆದಿದ್ದಾರೆ. ದೊಡ್ಡ ಟೂರ್ನಿಯಲ್ಲಿ ಅವಕಾಶ ಪಡೆದಿರುವ ಹಸ್ನೇನ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಉತ್ತಮ ಅವಕಾಶ ಲಭಿಸಿದೆ.
ಶ್ರೀಲಂಕಾ ವಿರುದ್ಧದ ಸರಣಿ ವೇಳೆ ಶಾಹಿನ್ ಅಫ್ರಿದಿ ಗಾಯಗೊಂಡಿದ್ದರು. ಅವರಿಗೆ ನಾಲ್ಕು ವಾರಗಳ ವಿಶ್ರಾಂತಿಗೆ ಸೂಚಿಸಿರುವುದರಿಂದ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಏಷ್ಯಾಕಪ್ ತಂಡದಿಂದ ಹೊರಬಿದ್ದಿದ್ದರು.