ಏನ್ ಬಿಚ್ಚಿಡ್ತಿನಿ, ಬಚ್ಚಿಡ್ತೀನಿ ಅಂತ ಹೇಳೋದಲ್ಲ. ಅದೇನು ಬಿಚ್ಚಿಡಬೇಕೋ, ಬಚ್ಚಿಡಬೇಕೋ ಅದನ್ನು ಬಿಚ್ಚಿಡಿ ಮಿಸ್ಟರ್ ಬ್ಲಾಕ್ ಮೇಲರ್ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಅದೇನೋ ಬಿಚ್ಚಿಡ್ತಿನಿ, ಬಿಚ್ತಿನಿ ಅಂತ ಹೇಳಿದ್ದಾರೆ. ಅವರು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಬಿಚ್ಚಿದ್ದು ಎಲ್ಲರಿಗೂ ಗೊತ್ತಿದೆ ಎಂದರು.

ಕುಮಾರಸ್ವಾಮಿ ಅವರು ಬಿಚ್ಚಿದ್ದು ಬಿಚ್ಚಿಟ್ಟಿದ್ದು ಎಲ್ಲರಿಗೂ ಗೊತ್ತಿದೆ. ಅವರಂತಹ ಹಿನ್ನೆಲೆ ನನಗಿಲ್ಲ. ನನ್ನ ಹಿನ್ನೆಲೆ ಸ್ಪಷ್ಟವಾಗಿದೆ. ನಾನು ಅವರು ಏನು ಬಿಚ್ಚಿಡ್ತಾರೋ ನೋಡೋಣ ಎಂದು ನಾನು ಕಾಯುತ್ತಿರುವೆ ಎಂದು ಅಶ್ವಥ್ ನಾರಾಯಣ ಗೌಡ ಹೇಳಿದ್ದಾರೆ.
ಗಾಳಿಯಲ್ಲಿ ಗುಂಡು ಹೊಡೆದಂತೆ ಅಲ್ಲ. ಎಲ್ಲರ ಹತ್ತಿರ ಆಟ ಆಡಿದಂತೆ ನಮ್ಮ ಬಳಿ ಆಟ ಆಡೋಕೆ ಆಗಲ್ಲ. ನಮ್ಮ ಬಳಿ ಇದೆಯಲ್ಲ ನಡೆಯಲ್ಲ. ಬೇರೆಯವರಿಗೆ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಅವರಂತ ಹಿನ್ನೆಲೆ ನಾನು ಹಿಡ್ಕೋಂಡಿಲ್ಲ. ನಮಗೆ ಇಂತಹ ಅಭ್ಯಾಸವೂ ಇಲ್ಲ. ವಂಶ ಪಾರಂಪರ್ಯ ರಾಜಕಾರಣ ನಮ್ಮ ಬಳಿ ಇಲ್ಲವೂ ಇಲ್ಲ ಎಂದು ಅವರು ಸವಾಲು ಹಾಕಿದರು.