ಶಿವಮೊಗ್ಗ : ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜ್ಯದಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿಸಿದ್ದಾರೆ. ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ವಿದೇಶದಿಂದ ನನಗೆ ರಾತ್ರಿ ಬೆದರಿಕೆ ಕರೆ ಬಂದಿದೆ ಎಂದಿದ್ದಾರೆ.
ನನಗೆ ಕಝಕಿಸ್ತಾನದಿಂದ ರಾತ್ರಿ 12 ಗಂಟೆಗೆ ಕರೆ ಮಾಡಲಾಗಿದೆ. ನಾನು ಮೊಬೈಲ್ ಸೈಲೆಂಟ್ ಮೋಡ್ನಲ್ಲಿ ಇಟ್ಟಿದ್ದರಿಂದ ನಾನು ಕರೆ ಸ್ವೀಕರಿಸಿಲ್ಲ. +7 (678)815 415 ನಂಬರ್ ನಿಂದ ನನಗೆ ಕರೆ ಬಂದಿದೆ. ನಾನು ಈ ಬಗ್ಗೆ ಪೊಲೀಸರಿಗೆ ದೂರು ನೀಡಲಿದ್ದೇನೆ ಎಂದಿದ್ದಾರೆ.
ನಾವು ಈಗ ವಿರೋಧ ಪಕ್ಷದ ಸ್ಥಾನದಲ್ಲಿದ್ದೇವೆ. ಮುಂಬರುವ ದಿನಗಳಲ್ಲಿ ಕಾವಲು ನಾಯಿಯಂತೆ ವಿರೋಧ ಪಕ್ಷದಲ್ಲಿದ್ದು ಜನರ ಸೇವೆ ಮಾಡುತ್ತೇವೆ ಎಂದಿದ್ದಾರೆ.