ಬೆಂಗಳೂರು: ದರ್ಶನ್ (Actor Darshan) ಅಭಿಮಾನಿಗಳಿಂದ ನನಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಆರೋಪಿಸಿ ಸಿನಿಮಾ ನಿರ್ಮಾಪಕ ಭರತ್ ದೂರ ಸಲ್ಲಿಸಿದ್ದಾರೆ.
‘ಭಗವಾನ್ ಶ್ರೀಕೃಷ್ಣ’ ಸಿನಿಮಾ (2022) ಮಾಡುತ್ತಿದ್ದೆ. ಶೆಡ್ಯೂಲ್ ಮುಗಿದ ಮೇಲೆ ನಾವು ಒಂದು ಬ್ರೇಕ್ ತೆಗೆದುಕೊಂಡಿದ್ದೆವು. ಆಗ ದರ್ಶನ್ ಅವರು ನನಗೆ ಸಿನಿಮಾ ಮಾಡುವಂತೆ ಒತ್ತಡ ಹಾಕುತ್ತಾರೆ. ಸಿನಿಮಾ ಮಾಡದಿದ್ದರೆ ನೀನು ಭೂಮಿ ಮೇಲೆ ಇಲ್ಲದಂತೆ ಮಾಡುತ್ತೇವೆ ಎಂದು ಹೆದರಿಸಿದ್ದರು.
ಮತ್ತೆ ನನ್ನನ್ನು ಫ್ಯಾಕ್ಟರಿಯೊಂದಕ್ಕೆ ಕರೆಸಿಕೊಂಡು ಎನ್‌ಒಸಿಗೆ ಸಹಿ ಹಾಕು ಎಂದು ಒತ್ತಡ ಹೇರಿದ್ದರು. ನನ್ನೊಂದಿಗೆ ನನ್ನ ಸ್ನೇಹಿತರು ಬಂದಿದ್ದಕ್ಕೆ ನಾನು ಆಗ ಪ್ರಾಣ ಉಳಿಸಿಕೊಂಡಿದ್ದೆ. ಬೆದರಿಕೆ ಪ್ರಕರಣದಲ್ಲಿ ದರ್ಶನ್ ಅವರನ್ನು ಕರೆಯಿಸಿ ಪೊಲೀಸರು ತನಿಖೆ ಮಾಡಿರಲಿಲ್ಲ. ಆಮೇಲೆ ನಾನು ಸುಮ್ಮನಾಗಿದ್ದೆ. ಈಗ ಕೊಲೆ ಪ್ರಕರಣ ಬೆಳಕಿಗೆ ಬಂದ ಮೇಲೆ ನನ್ನ ಹಳೆಯ ಆಡಿಯೋ ವೈರಲ್ ಆಗುತ್ತಿದೆ. ಹೀಗಾಗಿ ಅವರ ಅಭಿಮಾನಿಗಳು ಬೆದರಿಕೆ ಸಂದೇಶ ಕಳುಹಿಸುತ್ತಿದ್ದಾರೆ. ನನಗೆ ರಕ್ಷಣೆ ನೀಡಿ ಎಂದು ದೂರು ಸಲ್ಲಿಸಿದ್ದಾರೆ.