ಮಂಡ್ಯ: ನಾನು ಬಿಜೆಪಿ ಸೇರ್ಪಡೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲವೆಂದು ಮಂಡ್ಯ ಸಂಸದೆ ಮತ್ತು ಹಿರಿಯ ನಟಿ ಸುಮಲತಾ ಅಂಬರೀಶ್ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿರುವ ಅವರು, ‘ನಾನು ಬಿಜೆಪಿ ಸೇರುವ ವಿಚಾರದ ಬಗ್ಗೆ ಏನೂ ಇಲ್ಲ. ಪಕ್ಷದ ವರಿಷ್ಠರು ನನ್ನ ಜೊತೆ ಮಾತಾಡಿರುವುದು ನಿಜ’ವೆಂದು ಹೇಳಿದ್ದಾರೆ.
‘ನಾನು ಪಕ್ಷ ಸೇರುವ ಬಗೆಗೆ ಇನ್ನೂ ನಿರ್ಧರಿಸಿಲ್ಲ. ಹೋದ ಕಡೆಗಳಲ್ಲಿ ನಾನು ಜನರನ್ನು ಕೇಳ್ತಿನಿ ಅಥವಾ ಜನರೇ ನನ್ನ ಕೇಳ್ತಾರೆ. ಆ ಬಗೆಗೆ ಇನ್ನೂ ನಾನು ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯಕ್ಕೆ ಹೀಗೆ ಇರಿ ಎಂದು ಜನರು ಹೇಳ್ತಿದ್ದಾರೆ’ ಎಂದು ತಿಳಿಸಿದ್ದಾರೆ.ಸಿ.ಪಿ.ಯೋಗೇಶ್ವರ್ ಅವರಿಗೆ ನಾನು ಬಿಜೆಪಿ ಸೇರಬೇಕು ಎಂಬ ಭಾವನೆ ಇದೆ. ಬಿಜೆಪಿ ವರಿಷ್ಟರೂ ನನ್ನ ಜೊತೆ ಈ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಆದರೆ ನಾನಿನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಎಸ್.ಸಚ್ಚಿದಾನಂದಗೆ ನನ್ನ ಬೆಂಬಲ ಇದೆ. ಇದರಲ್ಲಿ ಯಾವುದೇ ಸೀಕ್ರೆಟ್ ಇಲ್ಲ’ವೆಂದು ಅವರು ಹೇಳಿದ್ದಾರೆ.
‘ನಾನೇ ಸಚ್ಚಿದಾನಂದ ಅವರಿಗೆ ಬೆಂಬಲ ಕೊಟ್ಟಿದ್ದೀನಿ. ಹೀಗಾಗಿ ಅವರು ಫ್ಲೆಕ್ಸ್ನಲ್ಲಿ ನನ್ನ ಫೋಟೋ ಬಳಸಿಕೊಳ್ಳುತ್ತಿದ್ದಾರೆ. ಪಕ್ಷ ಸೇರುವ ಬಗೆಗೆ ಅಧಿಕೃತವಾಗಿ ನಾನು ಯಾವುದೇ ರೀತಿಯ ಸರ್ವೆ ಮಾಡ್ತಿಲ್ಲ. ಮಾಮೂಲಾಗಿ ಜನರ ಜೊತೆಯಲ್ಲಿ ಮಾತಾಡ್ತಿದ್ದೀನಿ’ ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.












