ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿತನಾಗಿರುವ ಮುಂಬೈನ ಕ್ರೂಸ್ ಡ್ರಗ್ಸ್ ಪ್ರಕರಣದ ನಿಜ ಬಣ್ಣ ದಿನದಿಂದ ದಿನಕ್ಕೆ ಬಯಲಾಗತೊಡಗಿದೆ.
ಮಾದಕ ವಸ್ತು ನಿಗ್ರಹ ದಳ(NCB) ಮತ್ತು ಅದರ ಅಧಿಕಾರಿ ಸಮೀರ್ ವಾಂಖೇಡೆ ಅವರ ಕುರಿತೇ ಈ ದಾಳಿ ಈಗಾಗಲೇ ಸಾಲು ಸಾಲು ಅನುಮಾನಗಳನ್ನು ಎತ್ತಿದೆ. ಜೊತೆಗೆ ಸ್ವತಃ NCBಯ ವಿಶ್ವಾಸಾರ್ಹತೆಯೇ ಇದೀಗ ಶಂಕೆಗೆ ಈಡಾಗಿದೆ.
ಸಮೀರ್ ವಾಂಖೇಡೆ ಎಂತಹ ಅಧಿಕಾರಿ ಮತ್ತು NCB ಎಂಬ ಕಣ್ಗಾವಲು ವ್ಯವಸ್ಥೆ, ಶಾರುಖ್ ಖಾನ್ ಗುರಿಯಾಗಿಸಿಕೊಂಡು ಆತನ ಮಗನ ಬದುಕು ಬರ್ಬಾದ್ ಮಾಡಲು ಹೇಗೆಲ್ಲಾ ಪ್ರಯತ್ನಿಸುತ್ತಿದೆ ಎಂಬುದಕ್ಕೆ ಕೆಲವೊಂದು ವಾಸ್ತವಾಂಶಗಳನ್ನು ಗಮನಿಸಿ;
ಕ್ರೂಸ್‌ನಲ್ಲಿ ಡ್ರಗ್ಸ್ ಪಾರ್ಟಿ ಇತ್ತು ಎಂದು ಆರೋಪಿಸುವ NCB, ಕ್ರೂಸ್ ಮಾಲೀಕನನ್ನು ಬಂಧಿಸುವುದಿಲ್ಲ. ಬದಲಿಗೆ ಶಾರುಖ್ ಖಾನ್ ಮಗನನ್ನು ಬಂಧಿಸುತ್ತದೆ.

ಆರ್ಯನ್ ಖಾನ್ ಮತ್ತು ಅರ್ಬಾಝ್ ಮರ್ಚಂಟ್ ಅನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು. ಆದರೆ ಅವರಿಬ್ಬರು ಕ್ರೂಸ್ ಪ್ರವೇಶಿಸುವ ಮುನ್ನವೇ ಅವರಿಬ್ಬರನ್ನು ಬಾಗಿಲಲ್ಲೇ ಬಂಧಿಸಲಾಗುತ್ತದೆ. ಆರ್ಯನ್ ಖಾನ್ ಬಳಿ ಡ್ರಗ್ಸ್ ಇರಲಿಲ್ಲ. NCB ಹೇಳುವ ಪ್ರಕಾರ ಅರ್ಬಾಝ್ ಮರ್ಚಂಟ್ ಶೂ ಒಳಗೆ 6 ಗ್ರಾಂ ಚರಸ್ ಇತ್ತು. ಕೇವಲ ಆರು ಗ್ರಾಂ! ಆರ್ಯನ್ ಬಳಿ ಏನೂ ಇರಲಿಲ್ಲ. ಹಾಗಾದರೆ ಆರ್ಯನ್‌ನನ್ನು ಯಾಕೆ ಬಂಧಿಸಲಾಯ್ತು?
ಆರ್ಯನ್ ಖಾನ್ ಡ್ರಗ್ಸ್ ಸೇವಿಸಿಯೂ ಇರಲಿಲ್ಲ. ಆತ ಡ್ರಗ್ಸ್ ಸೇವನೆ ಮಾಡಿದ ಎನ್ನುವುದಕ್ಕೆ ಯಾವ ಸಾಕ್ಷ್ಯಗಳೂ ಇಲ್ಲ. ಡ್ರಗ್ಸ್ ಸೇವನೆ ಮಾಡಿದ್ದನೆ ಎಂದು ಖಚಿತಪಡಿಸಲು ಆರ್ಯನ್ ಖಾನ್‌ನ ವೈದ್ಯಕೀಯ ಪರೀಕ್ಷೆ ಕೂಡ ಮಾಡಲಿಲ್ಲ. ಡ್ರಗ್ಸ್ ಅವನ ಬಳಿ ಇರಲೂ ಇಲ್ಲ, ಆತ ಸೇವಿಸಿಯೂ ಇಲ್ಲ ಎಂದ ಮೇಲೆ NCB ಅಧಿಕಾರಿ ಸಮೀರ್ ವಾಂಖೇಡೆ, ಆರ್ಯನ್ ಖಾನ್‌ನನ್ನು ಯಾಕೆ ಬಂಧಿಸುತ್ತಾರೆ?
NCB ಪ್ರಕಾರ ಆರ್ಯನ್ ಖಾನ್, ಅರ್ಬಾಝ್ ಮರ್ಚಂಟ್ ಮುಂತಾದವರು ಕಳೆದ ಒಂದು ತಿಂಗಳಿನಿಂದ ಈ ಡ್ರಗ್ಸ್ ಪಾರ್ಟಿಗಾಗಿ ಪ್ಲ್ಯಾನ್?







