ಅಯೋಧ್ಯೆಯ (Ayodhya) ರಾಮಮಂದಿರಕ್ಕೆ ಶ್ರೀರಾಮನ ಮೂರ್ತಿಯನ್ನು (Ramalalla) ಅದ್ಭುತವಾಗಿ ಕೆತ್ತಿ, ಅದೇ ಮೂರ್ತಿ ಈಗ ಅಲ್ಲಿ ಸ್ಥಾಪನೆಯಾಗುವಂತೆ ಮಾಡಿರುವ ರಾಜ್ಯದ ಶಿಲ್ಪಿ ಅರುಣ್ ಯೋಗಿರಾಜ್,(Arun yogiraj) ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅರುಣ್ ಯೋಗಿರಾಜ್ ಅವರ ಆಗಮನಕ್ಕಾಗಿಯೇ ಕಾಯುತ್ತಿರುವ ರಾಜ್ಯ ಬಿಜೆಪಿಯ (BJP) ನಾಯಕರು, ಅವರಿಗೆ ನಾಳೆ ಅದ್ದೂರಿಯಾದ ಸ್ವಾಗತ ಕೋರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಅರುಣ್ ಯೋಗಿರಾಜ್ ಅವರು ಕೆತ್ತಿದ ಶಿಲ್ಪಿಯನ್ನೇ ರಾಮಮಂದಿರ ಟ್ರಸ್ಟ್ ಅಂತಿಮಗೊಳಿಸಿದ್ದು, ಅದನ್ನೇ ಈಗ ರಾಮಮಂದಿರದಲ್ಲಿ ಸ್ಥಾಪಿಸಲಾಗಿದೆ. ಇನ್ನು ರಾಜ್ಯಕ್ಕೆ ರಾಮನ ಪ್ರತಿಷ್ಠಾಪನೆ ಆದ ಬಳಿಕ ಆಗಮಿಸುತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್‌ಗೆ ವಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಎಸ್. ಆರ್.ವಿಶ್ವನಾಥ್, ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್, ಎಸ್. ಮುನಿರಾಜು, ಸಿ.ಕೆ.ರಾಮಮೂರ್ತಿ ಆದಿಯಾಗಿ ಹಲವು ನಾಯಕರು ಭವ್ಯ ಸ್ವಾಗತ ಕೋರಲಿದ್ದಾರೆ.

ಇನ್ನು ಅರುಣ್ ಯೋಗಿರಾಜ್ ಅವರು ನಾಳೆ ಸಂಜೆ 5 ಘಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಲಿದ್ದು, ಅವರ ಸ್ವಾಗತಕ್ಕಾಗಿ ಇಡೀ ಬಿಜೆಪಿ ತಂಡವೇ ಸನ್ನದ್ಧವಾಗಿದೆ.