ಜಗತ್ತು ಇತ್ತೀಚೆಗೆ ತಂತ್ರಜ್ಞಾನ ವಿಜ್ಞಾನದಲ್ಲಿ ಸಾಕಷ್ಟು ಮುಂದುವರೆದಿದೆ ಎಷ್ಟೋ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲದ ಬಳಕೆಯಾಗದೆ ಯಂತ್ರಗಳ ಮುಖಾಂತರ ರೋಬೋಟ್ ಮಷೀನ್‌ಗಳ ಮುಖಾಂತರ ಕೆಲಸಗಳು ನಡೆಯುತ್ತಿವೆ ಹೀಗಾಗಿ ರೋಬೋಟ್ ಬಳಕೆಯನ್ನು ಕಡಿಮೆ ಮಾಡಬೇಕು ಅಂತ ದಶಕಗಳಿಂದ ಸಾಕಷ್ಟು ಮಾನವ ವಾದಿ ಸಂಘಟನೆಗಳು ವಿವಿಧ ದೇಶಗಳ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿವೆ.
ಆದರೆ ಇದಕ್ಕೆ ಯಾವ ಸರ್ಕಾರದಿಂದಲೂ ಹೆಚ್ಚಿನ ಆದ್ಯತೆಯನ್ನು ನೀಡುವುದಕ್ಕೆ ಸಾಧ್ಯವಾಗಿಲ್ಲ ಇದಕ್ಕೆ ಪ್ರಮುಖ ಕಾರಣ ಯಂತ್ರಗಳಿಗೆ ಮಿತಿಯನ್ನು ಹೇರಿದರೆ ಮುಂದಿನ ದಿನಗಳಲ್ಲಿ ವೇಗವಾಗಿ ಆಗಬೇಕಾದ ಕೆಲಸಗಳು ಆಮೆಗತಿಯಲ್ಲಿ ಸಾಗಲಿವೆ ಎಂಬ ಭಯ ಸರ್ಕಾರ ಸೇರಿದ ಹಾಗೆ ಖಾಸಗಿ ವಲಯದ ಬೃಹತ ಕಾರ್ಖಾನೆಯ ಮಾಲೀಕರಿಗೆ ಇದೆ. ಹೀಗಾಗಿ ಯಂತ್ರಗಳ ಜೊತೆ ಮಾನವರು ಕೂಡ ಕೆಲಸ ಮಾಡುವಂತಹ ಪರಿಸ್ಥಿತಿ ಕಳೆದ ಒಂದು ದಶಕದಿಂದ ಉಂಟಾಗಿದೆ ಆದರೆ ಇದೀಗ ಇದಕ್ಕೂ ಕೂಡ ಕಲ್ಲು ಹಾಕುವಂತಹ ತಂತ್ರಜ್ಞಾನ ಜಗತ್ತಿಗೆ ಪರಿಚಯವಾಗುತ್ತದೆ.
ಅದನ್ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂತ ಆಂಗ್ಲ ಭಾಷೆಯಲ್ಲಿ ಕರೆದರೆ ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ ಅಂತ ಹೇಳಲಾಗುತ್ತೆ ಈ ಶತಮಾನದ ಆರಂಭದಲ್ಲಿ ಇಡೀ ಮಾನವ ಲೋಕದಲಿ ಆವಿಷ್ಕಾರ ಗೊಳ್ಳುತ್ತಿರುವ ಮತ್ತು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುತ್ತಿರುವ ಪ್ರಬಲ ತಂತ್ರಜ್ಞಾನ ಅಂದರೆ ಅದು ಕೃತಕ ಬುದ್ಧಿಮತ್ತೆ, ಇದರ ಬಗ್ಗೆ ಸಂಶೋಧನೆ ನಡೆಸಿದ ಸಂಶೋಧಕರೆ ಮುಂದಿನ ದಿನಗಳಲ್ಲಿ ಇವು ಮಾನವ ಕುಲಕ್ಕೆ ಅಪಾಯಕಾರಿ ಆಗಬಹುದು ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾರೆ
ಇದಕ್ಕೆ ಪ್ರಮುಖ ಕಾರಣ ಮಾನವನಿಗೆ ಮೀರಿದ ಬಹುತೇಕ ಜ್ಞಾನ ಮತ್ತು ಸಂಪೂರ್ಣ ಲೋಕಜ್ಞಾನದ ಮಾಹಿತಿಯನ್ನು ಇವುಗಳಲ್ಲಿ ಅಳವಡಿಸಲಾಗುತ್ತದೆ ಮುಂದಿನ ದಿನಗಳಲ್ಲಿ ಮಾನವನ ಸಂಪೂರ್ಣ ಅರಿವು ಹೇಗೆ ಆಗಬಹುದು ಎಂಬ ಊಹೆ ಕೂಡ ಈ ಕೃತಕ ಬುದ್ಧಿಮತ್ತೆಯೊಳಗೆ ಇರುವ ಸಾಧ್ಯತೆಗಳಿವೆ ಮಾನವನ ವಿರುದ್ಧವೇ ಈ ಮಾನವ ನಿರ್ಮಿಸಿದ ತಂತ್ರಜ್ಞಾನ ಆಪತ್ತನ ತರಬಹುದು ಎಂಬ ಊಹೆಗಳು ಇವೆ.
ಹೀಗಾಗಿ ಕೃತಕ ಬುದ್ಧಿಮತ್ತೆಯನ್ನು ಇನ್ನಷ್ಟು ಸಂಶೋಧನೆ ಮಾಡಿದರೆ ಮುಂದಿನ ದಿನಗಳಲ್ಲಿ ಅವುಗಳಿಂದ ಆಪತ್ತು ಶತಸಿದ್ಧ ಅನ್ನುವುದು ಸಾಕಷ್ಟು ಸಂಶೋಧಕರ ಮಾತಾಗಿದೆ ಹಾಗಾಗಿ ಇವುಗಳ ನಿಯಂತ್ರಣ ಈಗಿನಿಂದಲೇ ಆಗಬೇಕು ಎಂಬ ಒತ್ತಾಯಗಳು ಕೂಡ ಸಂಶೋಧಕರ ವಲಯದಿಂದ ಕೇಳಿ ಬರುತ್ತಿವೆ ಆದರೆ ಇವುಗಳಿಗೆ ಮಣೆ ಹಾಕದ ಬೃಹತ್ ಬಂಡವಾಳಶಾಹಿ ಕಾರ್ಖಾನೆಗಳ ಮಾಲೀಕರು ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ ಹೀಗಾಗಿ ಇದು ಮುಂದೆಗಳಲ್ಲಿ ಯಾವ ರೀತಿಯ ಅನಾಹುತವನ್ನು ಸೃಷ್ಟಿಸಲಿದೆ ಅನ್ನೋದು ಯಕ್ಷಪ್ರಶ್ನೆ ಒಟ್ಟಾರೆಯಾಗಿ ಈ ಕೃತಕ ಬುದ್ಧಿಮತ್ತೆ ಮುಂದಿನ ದಿನಗಳಲ್ಲಿ ಮಾನವ ಕುಲಕ್ಕೆ ಆಪತ್ತು ತರುವುದರಲ್ಲಿ ಯಾವುದೇ ರೀತಿಯ ಅನುಮಾನ ಇಲ್ಲ ಎಂಬುದು ಬಹುತೇಕ ಸಂಶೋಧಕರ ವಾದ.